ಸುದ್ದಿಬಿಂದು ಬ್ಯೂರೋ
ಅಂಕೋಲಾ: ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದು ಯಾವುದೇ ಕುರುಹುಗಳನ್ನು ಬಿಡದೆ ಲಕ್ಷಾಂತರ ರೂಪಾಯಿಗಳನ್ನು ಎಗರಿಸಿದ ಘಟನೆ ಪುರಸಭೆ ವಾರ್ಡ್ ನಂಬರ್ 14ರ ಅನಂದಗಿರಿಯಲ್ಲಿ ನಡೆದಿದೆ.
ತಾಲೂಕಿನ ಪೂರ್ಣ ಪ್ರಜ್ಞಾ ಕರುಣಾ ವಿಜ್ಞಾನ ಪದವಿಪೂರ್ವ ಕಾಲೇಜಿನ ಸಿಸಿ ಕ್ಯಾಮರಗಳನ್ನು ನಿಷ್ಕ್ರಿಯಗೊಳಿಸಿ, ಕಛೇರಿಯ ಡಿ ವಿ ಆರ್ ಬಾಕ್ಸ್ ನಾಶಪಡಿಸಿದ್ದು,ಕಳ್ಳತನದ ಮಾಹಿತಿ ಲಭ್ಯವಾಗದಂತೆ ಕರಾಮತ್ತು ತೋರಿಸಿದ್ದಾರೆ. ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲೇ ಇದ್ದ ಪ್ರಿ ಪ್ರೈಮರಿಯನ್ನು ಬಿಡದ ಕಳ್ಳರು ಕಚೇರಿಯ ಒಳ ನುಗ್ಗಿ ಅಲ್ಲಿದ್ದ 18 ಸಾವಿರ ರೂಪಾಯಿಗಳನ್ನು ಹಾಗೆಯೇ ಇನ್ನಿತರ ಮೌಲ್ಯಾಧಾರಿತ ವಸ್ತುಗಳನ್ನು ಅಪಹರಿಸಿ ಪರಾರಿಯಾಗಿದ್ದಾರೆ.ಕಾಲೇಜು ಹಾಗೂ ಪ್ರಿ 0 0 1,75,000 0 2,00,000 ವರೆಗೆ ನಗದು ಕಳ್ಳತನವಾಗಿರುವ ಬಗ್ಗೆ ಶಿಕ್ಷಣ ಸಂಸ್ಥೆ ದೃಢಪಡಿಸಿದ್ದು,ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ತನಿಖೆಕೈಗೊಂಡಿದ್ದಾರೆ.
ಇದನ್ನೂ ಓದಿ