ಸುದ್ದಿಬಿಂದು ಬ್ಯೂರೋ
ಕುಮಟಾ : ಯುವಕರು ಒಮ್ಮೆ ದುಶ್ಚಟಗಳಿಗೆ ಒಳಗಾದರೆ ಅವರನ್ನ ಅದರಿಂದ ಹೊರ ತರೋದು ತುಂಬಾನೆ ಕಷ್ಟ. ಆದರೆ ಉತ್ತರಕನ್ನಡ ಪೊಲೀಸರು ಅದೆಷ್ಟೆ ಪ್ರಯತ್ನ ಮಾಡತ್ತಾ ಇದ್ದರೂ ಕೂಡ ಹೆಚ್ಚೆಚ್ಚು ಯುವಕರು ದುಶ್ಚಟಕ್ಕೆ ಒಳಾಗಾಗುತ್ತಿದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶಲ್ಲಿನ ಯುವಕರು ಮಾದಕ ಸೇವನೆಗೆ ಹೆಚ್ಚು ಒಳಗಾಗುತ್ತಿದ್ದಾರೆ ಎನ್ನುವ ಮಾತುಗಳು ಇದೀಗ ಗ್ರಾಮೀಣ ಪ್ರದೇಶದಲ್ಲ ಕೇಳಿ ಬರುತ್ತಿದೆ.

ಇಷ್ಟು ದಿನಗಳ ಕಾಲ ಪ್ರವಾಸಿ ತಾಣಗಳಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿತ್ತು, ಅಷ್ಟೆ ಅಲ್ಲದೆ ಪ್ರವಾಸಿ ತಾಣಗಳಿರುವ ಸ್ಥಳದಲ್ಲೆ ಪೊಲೀಸರು ದಾಳಿ ನಡೆಸಿದ ಅನೇಕರನ್ನ ಬಂಧಿಸಿದ್ದಾರೆ. ಆದರೆ ಇದೀಗ ಪ್ರವಾಸಿ ತಾಣವನ್ನೂ ದಾಣಿ ಗ್ರಾಮೀಣ ಭಾಗದಲ್ಲಿಯೂ ಗಾಂಜಾ ಘಾಟು ಬರಲಾರಂಭಿಸಿರುವುದು ಗ್ರಾಮೀಣ ಪ್ರದೇಶದ ಜನರನ್ನ ಬೆಚ್ಚಿ ಬಿಳಿಸುವಂತೆ ಮಾಡುತ್ತಿದೆ ಎನ್ನುವ ಬಗ್ಗೆ ಪ್ರಜ್ಞಾವಂತ ನಾಗರಿಕರಿ ಆಡಿಕೊಳ್ಳುತ್ತಿದ್ದಾರೆ.

ಗೋಕರ್ಣ ಹಾಗೂ ಕುಮಟಾ ಸುತ್ತಮುತ್ತಲಿನ ಅನೇಕ ಗ್ರಾಮೀಣ ಪ್ರದೇಶದ ಯುವಕರು ಇತ್ತೀಚಿನ ದಿನದಲ್ಲಿ ಗಾಂಜಾ ನಶೆ ಒಳಗಾಗುತ್ತಿರುವುದು ನಿಜಕ್ಕೂ ದುರಂತ.ಬಹುತೇಕ ಕಡೆಯಲ್ಲ ಈಗ ಮದ್ಯ ಸೇವನೆಗಿಂತ ವೇಗವಾಗಿ ಗಾಂಜಾ ಸೇವನೆಗೆ ಯುವಕರು ಒಳಗಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ವೈಟ್ನರ್‌ಗೆ ಭಾರೀ ಬೇಡಿಕೆ.
ಗ್ರಾಮೀಣ ಭಾಗದಲ್ಲಿನ ಅಂಗಡಿಗಳಲ್ಲಿ ವೈಟ್ನರ್ ಖದೀರಿ ಜೋರಾಗಿ ನಡಿತ್ತಾ ಇದೆ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿದೆ. ಹೆಚ್ಚಾಗಿ 20ರಿಂದ 35ವರ್ಷದ ಒಳಗಿನ ಯುವಕರು ಹೆಚ್ಚು ವೈಟ್ನರ್ ಖರೀದಿ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ವೈಟ್ನರ್ ಸಿಗರೇಟಿಗೆ ಮಿಶ್ರಣ ಮಾಡಿ ಅದನ್ನ ಸೇವನೆ ಮಾಡಿದ್ದರೆ ಗಾಂಜಾಗಿಂತ ಹೆಚ್ಚಲು ಕಿಕ್ಕೇರಿಸುತ್ತೆ ಎನ್ನಲಾಗಿದೆ. ಹೀಗಾಗಿ ಹೆಚ್ಚಿನ ಯುವಕರು ಸಿಗೇರಟ್‌ಗೆ ವೈಟ್ನರ್ ಮಿಶ್ರಣ ಮಾಡಿ ಸೇವನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿನ ಕೆಲ ಅಂಗಡಿಗಳಲ್ಲಿ ಹೆಚ್ಚಾಗಿ ವೈಟ್ನರ್ ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಜಿಲ್ಲಾ ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವ ಮೂಲಕ ದಾರಿ ತಪ್ಪುತ್ತಿರುವ ಯುವಕರಿಗೆ ಕಡಿವಾಣ ಹಾಬೇಕಾಗಿದೆ..

ಇದನ್ನೂ ಓದಿ