suddibindu.in
ಅಂಕೋಲಾ: ಶಿರೂರು ಗುಡ್ಡ ಕುಸಿತದ ದುರ್ಘಟನೆಯಲ್ಲಿ ನಾಪತ್ತೆಯಾಗಿರುವವರ ಶೋಧ ಕಾರ್ಯಾಚರಣೆಯನ್ನು ಪುನಃ ಪ್ರಾರಂಭಿಸುವಂತೆ ನಾಮಧಾರಿ‌ ಮುಖಂಡರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ
.

ಈ‌ ಕುರಿತು ಶಿರೂರಿನ ಪ್ರಮುಖರಾದ ಅರುಣ ನಾಯ್ಕ ರವರ ಮನೆಯಲ್ಲಿ ಸಭೆ ನಡೆಸಿ ಅಂಕೋಲಾ ‌ಭಾಗದ ನಾಮಧಾರಿ ಮುಖಂಡರು. ಶಿರೂರಿನ ಗುಡ್ಡ ಕುಸಿತದ ದುರಂತದಲ್ಲಿ 11ಮಂದಿ ಸಾವನ್ನಪ್ಪಿದ್ದು ಎಂಟು ಮಂದಿಯ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಮೂವರಾದ ಜಗನ್ನಾಥ ನಾಯ್ಕ,ಲೋಕೇಶ ನಾಯ್ಕ,ಕೇರಳದ ಅರ್ಜುನ್ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ, ನಾಪತ್ತೆಯಾದ ಜಗನ್ನಾಥ ನಾಯ್ಕರ ಕುಟುಂಬಸ್ಥರು ಮೃತದೇಹ ಹುಡುಕಿಕೊಡುವಂತೆ ಪದೇ ಪದೇ ಅಳಲು ತೋಡಿಕೊಳ್ಳುತ್ತಿದ್ದರು. ಗಂಗಾವಳಿ ನದಿಯ ನೀರಿನ ಹರಿವಿನ ಮಟ್ಟ ಹೆಚ್ಚಿದ್ದರಿಂದ ಶೋಧಕಾರ್ಯಚರಣೆ ಸ್ಥಗಿತವಾಗಿತ್ತು.

ಇದನ್ನೂ ಓದಿ

ಆದರೆ ಇದೀಗ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪುನಃ ಶೋಧ ಕಾರ್ಯಾಚರಣೆ ಮುಂದುವರೆಸಬೇಕೆಂದು ತಾಲೂಕಾ ನಾಮಧಾರಿ ಸಮಾಜದವರೆಲ್ಲರೂ ಸೇರಿ ಜಿಲ್ಲಾಡಳಿತಕ್ಕೆ ಒತ್ತಡ ಹೇರಿದರು.ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ರಾಜೇಂದ್ರ ನಾಯ್ಕ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾರವರಿಗೆ ಕರೆಮಾಡಿ ಮಾತನಾಡಿ ಮೃತದೇಹ ಶೋಧ ಕಾರ್ಯ ಮುಂದುವರೆಸಬೇಕೆಂದು ಆಗ್ರಹಿಸಿದರು, ನದಿಯ ನೀರಿನ ಹರಿವಿನ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ಕಾರ್ಯಾಚರಣೆ ಆರಂಭಿಸುತ್ತೇವೆ ಮೃತರ ಕುಟುಂಬಸ್ಥರಿಗೆ ದೊರೆಯುವ ಸವಲತ್ತುಗಳನ್ನು ಶೀಘ್ರವಾಗಿ ತಲುಪುವಂತೆ ಮುತುವರ್ಜಿವಹಿಸುತ್ತೇವೆಂದು ಜಿಲ್ಲಾಧಿಕಾರಿ ‌ಲಕ್ಷ್ಮೀಪ್ರೀಯಾ ತಿಳಿಸಿದ್ದಾರೆ..

ಶಾಸಕ ಸತೀಶ ಸೈಲ್‌‌ ಕಾರ್ಯಕ್ಕೆ‌ ನಾಮಧಾರಿ‌ ಮುಖಂಡರಿಂದ‌ ಮೆಚ್ಚುಗೆ
ಗುಡ್ಡ ಕುಸಿತದ ದುರಂತದ ಕಾರ್ಯಾಚರಣೆಯಲ್ಲಿ ಸ್ಥಳದಲ್ಲಿಯೇ ಬೀಡುಬಿಟ್ಟು ಹಗಲಿರುಳು ನಿರಂತರವಾಗಿ ಶ್ರಮಿಸಿದ ಶಾಸಕ ಸತೀಶ್ ಸೈಲ್ ರವರ ಕಾರ್ಯವನ್ನು ನಾಮಧಾರಿ ಸಮಾಜದ ವತಿಯಿಂದ ಶ್ಲಾಘಿಸಲಾಯಿತು.ನಂತರ ಅವರಿಗೆ ಕರೆಮಾಡಿದ ಸ್ಥಳೀಯ ಗ್ರಾಪಂ ಸದಸ್ಯ ಅನಂತ ನಾಯ್ಕ ಕಾರ್ಯಾಚರಣೆ ಮುಂದುವರೆಸುವಂತೆ ಆಗ್ರಹಿಸಿದರು,‌ ಹಲವು ತಜ್ಞರೊಂದಿಗೆ ಮಾತನಾಡಿದ್ದೇನೆ,ಅವರೊಂದಿಗೆ ಮಂಗಳವಾರ ಶಿರೂರಿಗೆ ಬರುತ್ತೇನೆ ಅಲ್ಲಿಯೇ ಮುಂದಿನ ಕಾರ್ಯಾಚರಣೆಯ ಬಗ್ಗೆ ತಿಳಿಸುತ್ತೇನೆ,ಮೃತರ ಕುಟುಂಬಸ್ಥರು ದೈರ್ಯಗೇಡುವ ಅವಶ್ಯಕತೆಯಿಲ್ಲ ನಾನು ಎಂದಿಗೂ ನಿಮ್ಮೊಂದಿಗೆ ಇದ್ದೀನಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಆರ್ಯ,ಈಡಿಗ ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಎಂ ಪಿ ನಾಯ್ಕ,ಒಕ್ಕೂಟದ ಅಧ್ಯಕ್ಷ ನಾಗೇಶ ನಾಯ್ಕ(ಆಚಾ),ಪುರಸಭೆ ಸದಸ್ಯ ವಿಶ್ವಾನಾಥ ನಾಯ್ಕ,ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ್ ನಾಯ್ಕ,ಹೊನ್ನೆಬೈಲ್ ಗ್ರಾಪಂ ಅಧ್ಯಕ್ಷ ವೆಂಕಟರಮಣ ನಾಯ್ಕ,ಪ್ರಮುಖರಾದ ಉಪೇಂದ್ರ ನಾಯ್ಕ, ವೆಂಕಪ್ಪ ನಾಯ್ಕ,ಸ್ಥಳೀಯ ಮುಖಂಡರಾದ ಅರುಣ ನಾಯ್ಕ,ನಾಗರಾಜ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.