ಸುದ್ದಿಬಿಂದು ಬ್ಯೂರೋ
ಕುಮಟ
: ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಬರ್ಗಿ ಗ್ರಾಮ ಪಂಚಾಯತದ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಂದು ಶುಕ್ರವಾರ ನಡೆದಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಎರಡು ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಸಂತೋಷ ಸುಬ್ರಾಯ್ ಹರಿಕಾಂತ, ಉಪಾಧ್ಯಕ್ಷೆಯಾಗಿ ಮಹಾಲಕ್ಷ್ಮಿ ಅರುಣ ಹೊಸಮನಿ ಆಯ್ಕೆಗೊಂಡಿದ್ದಾರೆ. ಬರ್ಗಿ ಪಂಚಾಯತದಲ್ಲಿ ಒಟ್ಟು 15ಸದಸ್ಯರನ್ನ ಒಳಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂತೋಷ ಹರಿಕಾಂತ 8, ಪಡೆಯುವುದರೊಂದಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಇನ್ನೂ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಮಹಾಲಕ್ಷ್ಮಿ ಹೊಸಮನೆ‌ ಸಹ 8 ಮತಗಳ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಇನ್ನೂ ಇವರ ವಿರುದ್ಧ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿದ್ದ ರಾಮ ಕೆ ಪಟಗಾರ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮಂಗಲಾ ನಾಯಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು ಅಲ್ಪ‌ಮತಗಳಿಂದ ಹಿನ್ನಡೆ ಉಂಟಾಗುವಂತಾಯಿತು.