ಸುದ್ದಿಬಿಂದು ಬ್ಯೂರೋ
ಕುಮಟ
: ಉತ್ತರ ಕನ್ನಡ ಜಿಲ್ಲೆಯಲ್ಲಿರುವ (Uttarkannada) 231 ಗ್ರಾಮ ಪಂಚಾಯಿತಿಗಳಲ್ಲಿ ಕುಮಟಾ ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ ತನ್ನ ಆಡಳಿತ ಚುಕ್ಕಾಣಿ ಹಿಡಿಯುವುದರಲ್ಲಿ ತುಂಬಾ ವೈಶಿಷ್ಟ ಪೂರ್ಣವಾಗಿದೆ. ಸರಕಾರ ನಿಗದಿಪಡಿಸಿದ ಮೀಸಲಾತಿಯಲ್ಲಿ ಹುದ್ದೆಗೆರುವ ಗಾದೆಗಳಲ್ಲಿ ವೈರುಧ್ಯತೆ ಇದ್ದರು ಅದೃಷ್ಟದ ಆಟದಲ್ಲಿ ಓರ್ವ ಗ್ರಾಮ ಪಂಚಾಯತ ಸದಸ್ಯ ಸುಮಾರು ಹದಿಮೂರು ವರ್ಷಗಳ ಕಾಲ ನಿರಂತರವಾಗಿ ಅಧ್ಯಕ್ಷ ಅಥವಾ ಉಪಾಧ್ಯಕ್ಷನಾಗಿ ಜನಸೇವೆ ಮಾಡುವ ವ್ಯಕ್ತಿಯಾಗಿ ಮಂಚೂಣಿಯಲ್ಲಿರುವ ನಾಯಕನಾಗಿ ಹೊರಹೊಮ್ಮುತ್ತಿರುವುದು ಹೊಳೆಗದ್ದೆಯ ಎಸ್.ಟಿ.ನಾಯ್ಕ.

ಯಾವುದೇ ರಾಜಕೀಯದ (Politics) ನಂಟು ಇಲ್ಲದ ಕುಟುಂಬದಲ್ಲಿ ಜನಿಸಿದ ಸುರೇಶ ತಿಮ್ಮಪ್ಪ ನಾಯ್ಕ ಓದಿದ್ದು ಪಿಯುಸಿ ತನಕ ಮಾತ್ರ. 2010 ರಲ್ಲಿ ಗ್ರಾಮ ಪಂಚಾಯತ ಸದಸ್ಯರಾಗಿ ಆಯ್ಕೆಯಾದ ಪ್ರಥಮದಲ್ಲೇ ಗ್ರಾಮ ಪಂಚಾಯತ ಅಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಿ ಜನಮನ್ನಣೆಗಳಿಸಿ ಪಂಚಾಯತ ವ್ಯಾಪ್ತಿಯಲ್ಲಿ ಮನೆಮಾತಾದರು. 2015 ರಲ್ಲಿ ಎರಡನೇ ಬಾರಿ ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದರು. ಜಾತಿ ಭೇದವಿಲ್ಲದೆ ಮಾಡಿದ ಸಾಮಾಜಿಕ ಸೇವೆ ಇನ್ನಷ್ಟು ತೀವ್ರಗೊಳಿಸಿ ಅಸಹಾಯಕರ, ನಿರ್ಗತಿಕರ, ಶೋಷಿತರ ಬದುಕಿನ ಆಸರೆಯಾದರು.

ಪಂಚಾಯತ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಿರಲಿ ಮುಂಚೂಣಿಯಲ್ಲಿ ನಿಂತು ಸಾಮಾನ್ಯ ಜನರ ಮನಸ್ಸನ್ನು ಗೆಲ್ಲುವುದರ ಮೂಲಕ ಸರಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ಅಧಿಕಾರಿಗಳ ಮೆಚ್ಚುಗೆಗೂ ಪಾತ್ರರಾದರು. ನಂತರ ಮೀಸಲಾತಿಯಿಂದಾಗಿ ಅಧ್ಯಕ್ಷ ಹುದ್ದೆ ಕೈ ತಪ್ಪಿದರೂ ಉಪಾಧ್ಯಕ್ಷರಾಗಿ ಆಯ್ಕೆ ಮಾಡುವಲ್ಲಿ ಪಂಚಾಯಿತಿಯಲ್ಲಿರುವ 14 ಜನ ಸದಸ್ಯರು ಒಟ್ಟಾಗಿ ಅವಿರೋಧವಾಗಿ ಆಯ್ಕೆ ಮಾಡಿದರು. ಇಂದು ಮೂರನೇ ಬಾರಿಗೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಅವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.

ಬಿಜೆಪಿ(BJP) ಗುರುತಿಸಿಕೊಂಡಿರುವ ಎಸ್. ಟಿ. ನಾಯ್ಕ ಯಾವುದೇ ಪಕ್ಷದವರೊಂದಿಗೆ ಕಾದಾಟಕ್ಕಿಳಿಯದೇ ಗ್ರಾಮದ ಅಭಿವೃದ್ಧಿಯ ವಿಚಾರವಾಗಿ ಎಲ್ಲರನ್ನು ಅಪ್ಪಿ ಒಪ್ಪುವ ಜನಸೇವಕನಾಗಿ ಹೊರಹೊಮ್ಮುತ್ತಿರುವುದು ದೇವಗಿರಿ ಗ್ರಾಮ ಪಂಚಾಯತ ತುಂಬೆಲ್ಲಾ ಮನೆಮಾತಾಗಿರುತ್ತಾರೆ. ಕುಮಟಾದ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾಗಿಯೂ, ಧಾರೇಶ್ವರ ಗ್ರಾಮೀಣ ಸೇವಾ ಸಹಕಾರಿ ಸಂಘಕ್ಕೆ ಎರಡು ಬಾರಿ ಸದಸ್ಯರಾಗಿಯೂ ಆಯ್ಕೆಯಾಗಿರುತ್ತಾರೆ.

ತಾಲೂಕಿನಾದ್ಯಂತ ಚಿರಪರಿಚಿತರಾಗಿರುವ ಎಸ್.ಟಿ.ನಾಯ್ಕ ತನ್ನ ಸ್ವ ಸಾಮರ್ಥ್ಯ ಮೂಲಕ ರಾಜಕೀಯ ಮುತ್ಸದಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಪಕ್ಷ ನೀಡಿದ ಕೆಲಸವನ್ನು ಅಷ್ಟೇ ಪ್ರಾಮಾಣಿಕವಾಗಿ ನಿರ್ವಹಿಸುವ ಚಾಕಚಕ್ಯತೆ ಹೊಂದಿರುತ್ತಾರೆ. ಪಕ್ಷ ಇವರಿಗೆ ವಿವಿಧ ಸ್ಥರದ ಅವಕಾಶ ನೀಡಿ ಇನ್ನೂ ಹೆಚ್ಚಿನ ಜನಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.