ಸುದ್ದಿಬಿಂದು ನ್ಯೂಸ್ ಡೆಸ್ಕ್

ಹೊನ್ನಾವರ : ಪರವಾನಗಿ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿ ಜಾನುವಾರು ಹಾಗೂ ವಾಹನವನ್ನ ವಶಕ್ಕೆ ಪಡೆದುಕೊಂಡ ಘಟನೆ ಹಳದಿಪುರ ಸಮೀಪ ನಡೆದಿದೆ.

ಬಂಧಿತರು ಧಾರವಾಡ ಮೂಲದ ಚಾಲಕ ಸಂತೋಷ ಮಂಟೂರು, ಕ್ಲೀನರ್ ಮಣಿಕಂಠ ದೇಸಾಯಿ, ಬೈಂದೂರು ಮೂಲದ ನಾಗರಾಜ ಮೊಗೇರ್ ಬಂಧಿತರಾಗಿದ್ದಾರೆ.

ಲಾರಿಯಲ್ಲಿ ಹಿಂಸಾತ್ಮಕವಾಗಿ ಬೈಂದೂರಿನಿಂದ ಪುಣೆಗೆ 4 ಹಸು, 7 ಕರು ಸೇರಿ 11 ಜಾನುವಾರುಗಳನ್ನ ಕಸಾಯಿಖಾನೆಯಲ್ಲಿ ವಧೆ ಮಾಡುವ ಉದ್ದೇಶದಿಂದ ಜಾನುವಾರುಗಳ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೊನ್ನಾವರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.