ಸುದ್ದಿಬಿಂದು ನ್ಯೂಸ್ ಡೆಸ್ಕ್ ‌
ಬೆಂಗಳೂರು :
ಈಗಾಗಲೆ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಮಾತ್ರ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಲು ಹಿಂದೆಟ್ಟು ಹಾಕುತ್ತಿದೆ. ಬಿಜೆಪಿಯೆ ನಡೆಸಿದ ಸರ್ವೆಯಲ್ಲಿಯೇ  ಬಿಜೆಪಿಗೆ ಭಾರೀ ಹಿನ್ನಡೆ ಆಗಲಿದೆ ಎನ್ನುವ ಸರ್ವೆ ವರದಿ ಬಹಿರಂಗವಾಗಿದೆ.

ಈಗಾಗಲೆ ರಾಜ್ಯದಲ್ಲಿ ನಾಲ್ಕೈದು ಹಂತದಲ್ಲಿ ಬಿಜೆಪಿ ಸರ್ವೆ ನಡೆಸಿದ್ದು ಅದರಲ್ಲಿ 39 ಹಾಲಿ ಶಾಸಕರಿಗೆ ಹಾಗೂ 9 ಸಚಿವರು ಗೆಲ್ಲುವುದು ಕಷ್ಟ ಎನ್ನುವ ಬಗ್ಗೆ ಬಿಜೆಪಿಯೇ ನಡೆಸಿರುವ ಸರ್ವೆಯಿಂದ ಹೊರಬಿದ್ದಿದೆ. ಇದರರಿಂದಾಗಿ ಬಿಜೆಪಿ ಹೈಕಮಾಂಡ ಸಹ ಬೆಚ್ಚಿಬಿದಿದ್ದು, ಶತಾಯಗತಾಯವಾಗಿ ಪಕ್ಷವನ್ಮ ಗೆಲ್ಲಿಸಲೆ ಬೇಕು ಎಂದು ಹಠಕ್ಕೆ ಬಿದಿದ್ದೆ.

ಈ ಕಾರಣಕ್ಕಾಗಿಯೆ ಬಿಜೆಪಿಯ ಅಮಿತ್ ಶಾ ಅವರು ಏ 01ರಿಂದ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿಯೇ ವಾಸ್ತವ್ಯ ಇರಲಿದ್ದಾರೆ, ಮತ್ತೊಮ್ಮೆ ಸರ್ವೆ ಮಾಹಿತಿಯನ್ನ ಪಡೆದು ಯಾವೇಲ್ಲಾ ಕ್ಷೇತ್ರದಲ್ಲಿ ಶಾಸಕರಾಗಿದ್ದವರಿಗೆ ಹಿನ್ನಡೆ ಇದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿಯನ್ನ ಪಡೆದು ಅಂತಹವರ ಬದಲಿಗೆ ಹೊಸವರಿಗೆ  ಅವಕಾಶ ನೀಡುವ ಸಾಧ್ಯತೆ ಇದೆ. ಈ ಸರ್ವೆಯ ಬಳಿಕ ಇದೀಗ ಶಾಸಕರಾಗಿದ್ದ ಹಲವರಿಗೆ ತಳಮಳ ಉಂಟಾಗಿದೆ.

ಶಾಸಕರಾಗಿದ್ದವರು ತಮ್ಮ ಶಾಸಕ ಅವಧಿಯಲ್ಲಿ ಮುಖಂಡ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳದೆ.ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿರುವುದು. ಹಾಗೂ ಅನ್ಯ  ಪಕ್ಷದಿಂದ ಬಿಜೆಪಿಗೆ ಬಂದು ಶಾಸಕರಾದ ಬಳಿಕ ಮೂಲಕ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನ ಕಡೆಗಣಿಸಿರುವುದು ಹಿನ್ನಡೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಈಗಾಗಲೆ ಬೇರೆ ಬೇರೆ ಸಂಸ್ಥೆಗಳು ನಡೆಸಿದ ಸರ್ವೆಯಲ್ಲಿಯೂ ಸಹ ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವುದು ಕಷ್ಟ ಎಂದು ಸರ್ವೆ ಹೇಳಿದೆ. ಇದರ ಬೆನ್ನಲೆ ಬಿಜೆಪಿಯೇ ನಡೆಸಿರುವ ಸರ್ವೆಯಲ್ಲಿಯೂ ಹಿನ್ನಡೆ ಆಗಿರುವುದು ರಾಜ್ಯ,ರಾಷ್ಟ್ರ ನಾಯಕರಿಗೆ ಶಾಕ್ ಆಗಿದ್ದು, ಇದರಿಂದಾಗಿ ಸೋಲುವ ಭೀತಿಯಿಂದ ತಪ್ಪಿಸಿಕೊಳ್ಳಲು ಹೈಕಮಾಂಡ ಅಳೆದು ತೂಗಿ ಹೊಸ ಆಯ್ಕೆ ನಡೆಯಲಿದೆ.

ಟಿಕೇಟ್ ನೀಡುವ ಬಗ್ಗೆ ಮತದಾನ

ಮಾರ್ಚ 31ರಂದು ಆಯಾ ಕ್ಷೇತ್ರದಲ್ಲಿ ಯಾರಿಗೆ ಟಿಕೇಟ್ ನೀಡಬೇಕು, ಬೇಡ ಎನ್ನುವ ಬಗ್ಗೆ ಮತದಾನದ ಪ್ರಕ್ರಿಯೆ ನಡೆಸಲಾಗುತ್ತಿದೆ‌. ಸಂಸದರು, ಎಂ ಎಲ್ ಸಿ, ಆಯಾ ತಾಲೂಕಾ ಪಂಚಾಯತ ಅಧ್ಯಕರು, ಜಿಲ್ಲಾ ಪಂಚಾಯತ ಅಧ್ಯಕ್ಷರು, ಹಾಗೂ ಪಕ್ಷದ ರಚನೆ ಮಾಡಿದ ಸಮಿತಿಯ ಸದಸ್ಯರು ಈ ಬಾರಿ ಯಾರಿಗೆ ಟಿಕೇಟ್ ನೀಡಬೇಕು,ಬೇಡ ಎನ್ನುವ ಬಗ್ಗೆ ಮತದಾನ ಮಾಡಬೇಕು.ಬಳಿಕ ಅದರ ವಿವರವನ್ನ ಅಂದೆ ಸಂಜೆ ಬೆಂಗಳೂರಿಗೆ ಕಳುಹಿಸಲಿದ್ದು, ಅಲ್ಲಿಂದ ದೆಹಲಿಗೆ ಕಳುಹಿಸುವ ಪ್ರಕ್ರಿಯೆ ನಡೆಯಲಿದ್ದು, ಇವೇಲ್ಲವನ್ನ ಪರಿಗಣಿಸಿದ ಬಳಿಕ ಕೇಂದ್ರದ ನಾಯಕರು ಏ 5 ಅಥವಾ 6ಕ್ಕೆ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಲಿದೆ ಎನ್ನಲಾಗಿದೆ.