ಸುದ್ದಿಬಿಂದು ಬ್ಯೂರೋ
ಶಿರಸಿ: ಉತ್ತರಕನ್ನಡ(Utarakannda) ಜಿಲ್ಲೆಯಲ್ಲಿಯಲ್ಲಿ ಈಗಾಗಲೇ ಕೈಗಾದಲ್ಲಿ ಅಣುಸ್ಥಾವರ, ಕಾರವಾರದಲ್ಲಿ ಸಿರ್ಬಡ್‌ ನೌಕಾನೆಲೆ,ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಹಾದುಹೋಗಿರುವ ಕೊಂಕಣ ರೈಲ್ವೆ ಮಾರ್ಗ,ಜಲಾಶಯಗಳು ಹೀಗೆ ಹತ್ತಾರು ಯೋಜನೆಗಾಗಿ ಜಿಲ್ಲೆಯ ಜನ ತಮ್ಮಗಿದ್ದ ಒಂದಿಷ್ಟು ಭೂಮಿಗಳನ್ನ ಸಹ ಯೋಜನೆಗಾಗಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.ಈ ನಡುವೆ ಇದೀಗ(Report by Kasturi Rangan) ಕಸ್ತೂರಿ ರಂಗನ್‌ ವರದಿ ಜಾರಿಯಾಗಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸುವಂತಾಗಿದೆ, ಇದನ್ನ ವಿರೋಧಿ ಇಂದು ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷ ರವೀಂದ್ರನಾಥ್ ‌ನಾಯ್ಕ‌ ನೇತೃತ್ವದಲ್ಲಿ ಶಿರಸಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು,

ನಗರದ ಮಾರಿಕಾಂಬಾ ದೇಗುಲದಿಂದ ಆರಂಭವಾದ ಈ ಪ್ರತಿಭಟನಾ ಮೇರವಣಿಗೆ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಕಸ್ತೂರಿ ರಂಗನ್‌ ವರದಿಯನ್ನ ವಿರೋಧಿಸಿ ಘೋಷಣೆ ಕೂಗಿದ್ದರು.ಜಿಲ್ಲೆಯ ಪ್ರತಿಯೊಂದು ತಾಲೂಕು ಹಾಗೂ ಹಳ್ಳಿಗಳಿದ್ದ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಸ್ತೂರಿ ರಂಗನ್‌ ವರದಿಗೆ ಜಾರಿಗೆ ತೀವೃವಾಗಿ ತಮ್ಮ ವಿರೋಧ ವ್ಯಕ್ತಪಡಿಸಿದರು, ಬಳಿಕ ನಗರದ ಪೊಲೀಸ್‌ ಮೈದಾನದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಸಮಾವೇಶದಲ್ಲಿ ಹತ್ತೂ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಮೂಲಕ ಕಸ್ತೂರಿ ರಂಗನ್‌ ವರದಿ ಜಾರಿಗೆ ತೀವೃ ವಿರೋಧ ವ್ಯಕ್ತಪಡಿಸಿದ್ದರು. ಕಸ್ತೂರಿ ರಂಗನ್‌ ವರದಿಯಿಂದಾಗಿ ಗುಡ್ಡಗಾಡು ಹಾಗೂ ಅರಣ್ಯ ಪ್ರದೇವನ್ನ ಈ ಜಿಲ್ಲೆಯಲ್ಲಿ ಹೆಚ್ಚಾಗಿದೆ, ಒಂದು ವೇಳೆ ಕಸ್ತೂರಿ ರಂಗನ್‌ ವರದಿ ಜಾರಿಯಾದರೆ. ಮುಖ್ಯವಾಗಿ ಜಿಲ್ಲೆಯಲ್ಲಿರುವ ಬುಡಕಟ್ಟು ಜನರಿಗೆ ಒಕ್ಕಲೆಬ್ಬಿಸುವ ಪರಿಸ್ಥಿತಿ ಸಹ ಎದುರಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಜಿಲ್ಲೆಯ ಅಭಿವೃದ್ದಿಗೂ ಹಿನ್ನಡೆ ಉಂಟಾಗಲಿದೆ. ಇದರಿಂದಾಗಿ ಜಿಲ್ಲೆಯ 137 ಗ್ರಾಮಗಳಲ್ಲಿನ 704 ಹಳ್ಳಿಗಳಿಗೆ ಸಮಸ್ಯೆ ಉಂಟಾಗಲಿದೆ.ಈಗಾಗಲೇ ಜಿಲ್ಲೆಯ ಜನ ಉದ್ಯೋಗಕ್ಕಾಗಿ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯವನ್ನ ಅವಲಂಬಿಸಿಕೊಂಡಿದ್ದಾರೆ, ಒಂದು ವೇಳೆ ಕಸ್ತೂರಿ ರಂಗನ್‌ ವರದಿ ಜಾರಿಯಾದಲ್ಲಿ ಮುಂದಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಇನ್ನಷ್ಟು ಸಮಸ್ಯೆಗಳನ್ನ ಎದುರಿಸಬೇಕಾದ ಪರಿಸ್ಥಿತಿ ಸಹ ನಿರ್ಮಾಣವಾಗುವ ಸಾಧ್ಯತೆ ಇದೆ.

ಇನ್ನೂ ಯಾವುದೇ ಯೋಜನೆ ಜಿಲ್ಲೆಗೆ ಬೇಕು ಎನ್ನುವ ಬಗ್ಗೆ ಯಾರೂ ಕೂಡ ಹೋರಾಟ ಮಾಡಲಾಗದಂತ ಸ್ಥಿತಿ ಎದುರಾಗಲಿದೆ, ಹೀಗಾಗಿ ಉತ್ತರಕನ್ನಡ ಜಿಲ್ಲೆಯ ಮೇಲೆ ಕಸ್ತೂರಿ ರಂಗನ್‌ ವರದಿಯನ್ನ ಹೆರುವ ಕೆಲಸವಾಗ ಬಾರದು ಎನ್ನುವದು ಹೋರಾಟಗಾರರ ನಿಲುವಾಗಿದೆ. ಹತ್ತಾರು ಯೋಜನೆಗಳ ಮೂಲಕ ಈಗಾಗಲೇ ನಿರಾಶ್ರಿತರಾಗಿರುವ ಜಿಲ್ಲೆ ಜನರಿಗೆ ಮಾರಕವಾಗಲಿರುವ ಕಸ್ತೂರಿ ರಂಗನ್‌ ವರದಿಯನ್ನ ಜಾರಿಗೆ ಮಾಡುವ ಮೂಲಕ ಜಿಲ್ಲೆಯ ಜನರನ್ನ ಮತ್ತೆ ಸಂಕಷ್ಟಕ್ಕೆ ನೂಕ್ಕುವ ಬದಲಿಗೆ ಜನ ವಿರೋಧಿಯಾಗಿರುವ ಈ ಕಸ್ತೂರಿ ರಂಗನ್‌ ವರದಿ ಕೈ ಬಿಡಬೇಕು ಎನ್ನುವುದು ಜಿಲ್ಲೆಯ ಹೋರಾಟಗಾರರ ಒತ್ತಾಯವಾಗಿದೆ.