suddibindu.in
Ankola:ಅಂಕೋಲಾ: ಪ್ಲಾಸ್ಟಿಕ್ ಚೀಲಗಳು ಮತ್ತಿತರ ತ್ಯಾಜ್ಯಗಳನ್ನು ತುಂಬಿಕೊಂಡು ಸಾಗುತ್ತಿದ್ದ ಭಾರೀ ಲಾರಿಗೆ (Lorry)ಆಕಸ್ಮಿಕ ಬೆಂಕಿ(Fire)ಅವಘಡದಲ್ಲಿ ಸುಟ್ಟು ಕರಕಲಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ(National Highway 63,) ಕಂಚಿನಬಾಗಿಲು ಸಮೀಪ‌ ನಡೆದಿದೆ.

ಇದನ್ನೂ ಓದಿ : -ಮಾರ್ಚ್ 5-6ಕ್ಕೆ ಕದಂಭೋತ್ಸವ

ಕೊಚ್ಚಿಯಿಂದ(Kochi,)ಸ್ಥಳೀಯ ಸಂಸ್ಥೆ (ಮುನ್ಸಿಪಾರ್ಟಿ ) ಒಂದರಲ್ಲಿ ವಿಂಗಡಿಸಿಡಲಾಗಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ತುಂಬಿಕೊಂಡು ಗುಲ್ಬರ್ಗ(Gulbarga,) ಕಡೆ ತೆರಳುತ್ತಿದ್ದ ಲಾರಿಗೆ ಕಂಚಿನಬಾಗಿಲ ಬಳಿ ಸಾಗುತ್ತಿದ್ದಾಗ ನಸುಕಿನ ಜಾವ 4.30ರ ಸುಮಾರಿಗೆ ವಾಹನದ ಬ್ಯಾಟರಿಯ ಶಾರ್ಟ್ ಸರ್ಕ್ಯೂಟ್(Short Circuit)ಬೆಂಕಿ ಹೊತ್ತಿಕೊಂಡು ಲಾರಿ ಸಂಪೂರ್ಣ ‌ಸುಟ್ಟು ಕರಕಲಾಗಿದೆ.

ಸುದ್ದಿ ತಿಳಿದ ಅಗ್ನಿಶಾಮಕ (Fire Extinguisher) ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಮಾಡಿದ್ದಾರೆ.ಇದರಿಂದ ಹೆಚ್ಚಿನ ಹಾನಿಯಾಗುವುದು ತಪ್ಪಿದಂತಾಗಿದೆ. ಪಿಎಸ್ಐ ಉದ್ದಪ್ಪ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.