suddibindu.in
Karwar:ಕಾರವಾರ : ಉತ್ತರ ಕನ್ನಡ (uttra Kannada) ಜಿಲ್ಲೆಯ ಹೆಮ್ಮೆಯ ಉತ್ಸವವಾದ ಕದಂಭೋತ್ವವವನ್ನು(Kadambotsava) ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ವೈಭವದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ (District Officer) ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಇದನ್ನು ಓದಿ : ಸಿಲಿಂಡರ್ ಸ್ಪೋಟ್ : ಹತ್ತು ಲಕ್ಷದ ಜಾನುವಾರು ಸಜಿವ ದಹನ

ಕದಂಭೋತ್ಸವದ ಅಂಗವಾಗಿ ಮಾರ್ಚ್ 3 ರಂದು ಗುಡ್ನಾಪುರದಿಂದ ಕದಂಬ ಜ್ಯೋತಿ ಹೊರಡಲಿದ್ದು, ಆ ದಿನ ಸಂಜೆ ಗುಡ್ನಾಪುರದಲ್ಲಿ ವಿವಿಧ ಸಾಂಸೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಕದಂಭೋತ್ಸವದ ಅಂಗವಾಗಿ ನಡೆಯುವ ಕ್ರೀಡಾಸ್ಪರ್ದೆಗಳ ನೊಂದಣಿಯನ್ನು ಫೆಬ್ರವರಿ 21ರಿಂದ 25 ರ ವರೆಗೆ ಮಾಡಿಕೊಳ್ಳಬಹುದಾಗಿದ್ದು, ಫೆಬ್ರವರಿ 27ರಿಂದ 29ರ ವರೆಗೆ ಎಲ್ಲಾ ಸ್ಪರ್ದೇಗಳು ನಡೆಯಲಿವೆ. ಸ್ಪರ್ಧೆಗಳಿಗೆ ನೊಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ( Sports Department).ಅಧಿಕಾರಿ ರವಿ ನಾಯಕ್ ಮೊ.ಸಂ. 7899104699ಅವರನ್ನ್ನು ಸಂಪರ್ಕಿಸಬಹುದಾಗಿದ್ದು, ಕುಸ್ತಿ, ಕಬಡ್ಡಿ, ವಾಲಿಬಾಲ್ ಸೇರಿದಂತೆ ಹಲವು ಕ್ರೀಡೆಗಳು ನಡೆಯಲಿವೆ ಎಂದರು.

ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ಅತ್ಯಂತ ವೈಭವದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕದಂಭೋತ್ಸವದಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.