suddibindu.in
Raichur: ರಾಯಚೂರು : ನಗರದ ಹೊರವಲಯದಲ್ಲಿ ಇರುವ ಹರ್ಷಿತಾ ಗಾರ್ಡನ್‌ನಲ್ಲಿ (Harshita garden) ಸಿಲೆಂಡರ್ (cylinder) ಸ್ಪೋಟಗೊಂಡಯ ಬೆಂಕಿ ಅವಘಡ (fire incident) ಸಂಭವಿಸಿ, ಕೊಟ್ಟಿಗೆಯಲ್ಲಿದ್ದ 10 ಲಕ್ಷ ಬೆಲೆಬಾಳುವ ಎತ್ತು ಗಳು (bull) ಸುಟ್ಟು ಕರಕಲಾಗಿದ ಘಟನೆ ಜರುಗಿದೆ.
ಇದನ್ನೂ ಓದಿ:- ಗೌರಿಯ ಗಂಗೆಗೆ ಅಧಿಕಾರಿಗಳಿಂದ ಹಲಿಗೆ
ಶಾರ್ಟ್ ಸರ್ಕ್ಯೂಟ್ (Short circuit)ನಿಂದ ಬೆಂಕಿ (Fire) ಕಾಣಿಸಿಕೊಂಡಿದ್ದು, ತದ ನಂತರ ಇದ್ದಕ್ಕಿದ್ದ ಹಾಗೆ ಕಾರ್ಮಿಕರ ವಸತಿ ನಿಲಯ ಹಾಗೂ ಗೋದಾಮಿಗೂ (Godam) ಬೆಂಕಿ ಹಬ್ಬಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆ ಭಸ್ಮವಾಗಿದೆ. ಈ ಒಂದು ಬೆಂಕಿ ಅವಘಡದಲ್ಲಿ ಮನೆಯ(home) ಪಕ್ಕದಲ್ಲಿದ್ದ ಕೊಟ್ಟಿಗೆಗೂ ಬೆಂಕಿ ಹೊತ್ತಿಕೊಂಡು ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎರಡು ಎತ್ತುಗಳಲ್ಲಿ ಒಂದು ಎತ್ತು ಸಜೀವ ದಹನವಾಗಿದೆ. ಈ ಒಂದು ಎತ್ತು 10 ಲಕ್ಷ ಬೆಲೆ ಬಾಳುತ್ತಿತ್ತು, ಅಕ್ಕ ಪಕ್ಕದಲ್ಲಿ ನಡೆಯುವ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ (Coemption) ಪಾಲ್ಗೊಳಲು ಕರೆದೆಯಲಾಗುತ್ತಿತ್ತು.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರಾಯಚೂರು ವೆಸ್ಟ್ ಪೊಲೀಸ್ ಸ್ಟೇಷನ್ (West police station) ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.