suddibindu.in
ಕುಮಟಾ : ಮೀನು ಹಿಡಿಯಲು ಹೋಗಿದ್ದ ವೇಳೆ‌ ನದಿಯಲ್ಲಿ ಮುಳುಗಿ ಬರ್ಗಿ ಗ್ರಾಮ ಪಂಚಾಯತ ಸದಸ್ಯ ನೋರ್ವ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದಲ್ಲಿ ನಡೆದಿದೆ.

ದಾವುದ್ ಅಲಿ ಘಾರಿಯಾ( 68) ಎಂಬಾತನೆ ಮೃತಪಟ್ಟಿರುವ ವ್ಯಕ್ತಿಯಾಗಿದ್ದಾನೆ.ಬೆಟ್ಕುಳಿ ಸಮೀಪ ಅಘನಾಶಿನಿ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದು,ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.ಮೃತ ದಾವುದ್ ಬರ್ಗಿ ಗ್ರಾಮ ಪಂಚಾಯತದ ಹಾಲಿ ಸದಸ್ಯನಾಗಿದ್ದಾನೆ.

ಇವರು ನಿರಂತರವಾಗಿ ಮೂರು ಬಾರಿ ಬರ್ಗಿ ಗ್ರಾಮ ಪಂಚಾಯತ್‌ಗೆ ಬೆಟ್ಕುಳಿ ‌ವಾರ್ಡ್‌ನಿಂದ ಆಯ್ಕೆಯಾಗುತ್ತಾ ಬಂದಿದ್ದು, ಕಳೆದ ಅವಧಿಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಹ ಆಗಿದ್ದ,ಹಾಲಿ ಬರ್ಗಿ ಗ್ರಾಮ ಪಂಚಾಯತ ಸದಸ್ಯನಾಗಿದ್ದರು..ಇನ್ನೂ‌ ಕಾಂಗ್ರೆಸ್ ಸಂಘಟನೆಯಲ್ಲಿ ಸದಾ ಸಂಕ್ರಿಯಾವಾಗಿ ಇರುತ್ತಿದ್ದ ದಾವುದ್ ಆಕಸ್ಮಿಕ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ