ಸುದ್ದಿಬಿಂದು ಬ್ಯೂರೋ
ಬನವಾಸಿ : ಹಣದ ಆಸೆಗಾಗಿ ವ್ಯಕ್ತಿ ಓರ್ವನ ಕೊಲೆ ಮಾಡಿ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಕೊರ್ಲಕಟ್ಟ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದ ಹಾವೇರಿ ಮೂಲದ ಮೂವರೂ ಕೊಲೆ ಆರೋಪಿಗಳನ್ನ ಬನವಾಸಿ ಪೊಲೀಸರು ಬಂಧಿಸಿದ್ದಾರೆ.
ಸೆ 15ರಂದು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಭಾಗದ ಕೊರ್ಲಕಟ್ಟ ಅರಣ್ಯ ಪ್ರದೇಶದ ಇಂಗುಗುಂಡಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಶವ ನೋಡಿದ ಪೊಲೀಸರು ಅಂದೆ ಇದೊಂದು ಕೊಲೆ ಎನ್ನುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಕೊಲೆಗಾರರ ಬಂಧನಕ್ಕಾಗಿ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಮೂರು ತಂಡಗಳನ್ನ ರಚಿಸಲಾಗಿತ್ತು.
ಕೊಲೆ ಬಳಿಕ ತನಿಖೆಗೆ ಇಳಿದ ಖಾಕಿ ಪಡೆ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದು ಆತ ಹಾನಗಲ್ ತಾಲೂಕಿನ ಅಶೋಕ ಉಪ್ಪಾರ್(55) ಎಂಬುದು ಪೊಲೀಸ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಳಿಕ ಆರೋಪಿಗಳ ಜಾಡು ಹಿಡಿದು ಹೋದಾಗ ಹಣದ ಆಸೆಗಾಗಿ ಕೊಲೆಯಾದ ಅಶೋಕ ಉಪ್ಪಾರ ಕೈ ಕೆಳಗೆ ಕೆಲಸಕ್ಕಿದ್ದ ಸುರಳೇಶ್ವರ, ನಿರಂಜನ್ ತಳವಾರ,ಗುಡ್ಡಪ್ಪ ತಿಳುವಳ್ಳಿ, ಎಂಬುವವರೆ ಅಶೋಕನಿಗೆ ಕೊಲೆಗೈದು ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ ಎಂದು ಗೊತ್ತಾಗಿದ್ದೆ ತಡ ಖಾಕಿ ಪಡೆ ಆ ಮೂವರೂ ಕೊಲೆಗಾರರನ್ನ ಎಳೆದುತಂದಿದ್ದಾರೆ. ಹಣದ ವಿಚಾರಕ್ಕೆ ಕೊಲೆ ಆರೋಪಿಗಳು ಆಗಾಗ ಅಶೋಕ ಬಳಿ ಜಗಳವಾಡುತ್ತಿದ್ದರು ಎನ್ನಲಾಗಿದ್ದು,ಹಣದ ಜಗಳ ಕೊನೆಗೂ ಕೊಲೆಯಲ್ಲಿ ಅಂತ್ಯ ಕಾಣುವಂತಾಗಿದೆ.