suddibindu.in

ಕಾರವಾರ; cm ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ (Budget) ಜನ ವಿರೋಧಿ ಬಜೆಟ್ ಆಗಿದ್ದು, ಉತ್ತರ ಕನ್ನಡ (uttar kannada)ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ ಟೀಕಿಸಿದ್ದಾರೆ.

ಕಳೆದ ವರ್ಷ ಬಿಜೆಪಿ ಸರಕಾರ (BJP Govt) ಇದ್ದಾಗ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರಕಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ (Multispecialty Hospital) ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.ಕಾಂಗ್ರೆಸ್ ಸರಕಾರದ (Congress Government)ಬಜೆಟ್ ನಿಂದ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ತುಂಬಾ ಅನ್ಯಾಯವಾಗಿದೆ.ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬಗ್ಗೆ ಘೋಷಿಸಿ, ಅನುದಾನ ಬಿಡುಗಡೆ ಮಾಡದೇ ಇರುವುದನ್ನು ಜಿಲ್ಲೆಯ ಜನತೆ ಕ್ಷಮಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ಬೈಕ್ ಅಪಘಾತ ಮಹಿಳೆ ಸಾವು

ರಾಜಕೀಯ ಕಾರಣಕ್ಕಾಗಿ ಬಜೆಟ್ ಮಂಡನೆ ವೇಳೆ ಕೇಂದ್ರ ಸರಕಾರವನ್ನು (Central Government,) ಟೀಕಿಸಿರುವುದು ಕೂಡ ವಿರೋಧಿಸುತ್ತೇವೆ.ಇನ್ನೂ ಮೀನುಗಾರಿಕೆ ಬಂದರುಗಳ ಅಭಿವೃದ್ಧಿಗೆ ಯಾವ ಅನುದಾನವೂ ಘೋಷಿಸಿಲ್ಲ. ಕರಾವಳಿ ಮೀನುಗಾರರ (Coastal Fishermen,)ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಆದ್ಯತೆ ಕೊಟ್ಟಿಲ್ಲ. ಮೀನುಗಾರರ ಪಾಲಿಗೆ ಕಣ್ಕಟ್ಟುವ ಬಜೆಟ್ ಇದಾಗಿದೆ.

ಇನ್ನೂ ಈ ಬಜೆಟ್ ರೈತ ವಿರೋಧಿ ಬಜೆಟ್ ಆಗಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಅಂಶವಿಲ್ಲ.ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಈ ಬಜೆಟ್ ಮಾಡಿದ್ದಾರೆ. ಇದು ರೈತರಿಗೆ ಅನುಕೂಲ ಆಗದೇ ಇರುವ ಬಜೆಟ್. ಇವರ ಪ್ರಣಾಳಿಕೆಯಲ್ಲಿ ನೇಕಾರರ ಅಭಿವೃದ್ಧಿ(Development)ಬಗ್ಗೆ ಹೇಳಿದ್ದರು.ಆದರೆ, ಇವತ್ತು ಆ ಮಾತೇ ಇಲ್ಲ. ನುಡಿದಂತೆ ನಡೆಯದ ಸರ್ಕಾರ ಇದಾಗಿದೆ. ರೈತರಿಗೆ ಬಡವರಿಗೆ ಅನ್ಯಾಯ ಆಗಿರೋ ಬಜೆಟ್. ಬರಗಾಲ ಸಂದರ್ಭದಲ್ಲಿ ಯಾವುದೇ ರೀತಿ ಸಹಾಯ ಆಗದೇ ಇರೋ ಬಜೆಟ್. ಒಬ್ಬ ಅನುಭವಿ ಸಿಎಂ ಈ ರೀತಿ ಬಜೆಟ್ ಮಾಡ್ತಾರೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ರಾಜ್ಯದ ಜನರ ಪಾಲಿಗೆ ಬದುಕಿದ್ದು ಈ ಸರ್ಕಾರ ಸತ್ತಂತೆ ಆಗಿದೆ ಎಂದು ಗಣಪತಿ ಉಳ್ವೇಕರ ಹೇಳಿದರು.