ಸುದ್ದಿಬಿಂದು ಬ್ಯೂರೋ
ಅಂಕೋಲಾ : ಅನ್ಯಕೋಮಿಗೆ ಸೇರಿ ಯುವಕ ನೋರ್ವ ತನ್ನ ಮೊಬೈಲ್ ಸ್ಟೇಟ್ಸ್ ನಲ್ಲಿ ಪ್ರಚೋದನಕಾರಿಯಾಗಿರುವ ಬರಹಗಳನ್ನ ಬರೆದುಕೊಂಡಿದ್ದು, ಕ್ರಮ ಜರುಗಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಎದುರು ಹಿಂದೂ ಯುವಕರು ಜಮಾಯಿಸಿದ್ದಾರೆ.
ಅಂಕೋಲಾ ಪಟ್ಟಣದ ಹುಲಿದೇವರವಾಡದ ಅನ್ಯಕೋಮಿನ ಯುವಕ ನೋರ್ವ ತನ್ನ ಮೊಬೈಲ್ ಸ್ಟೇಟ್ಸ್ ನಲ್ಲಿ ಹಿಂದೂಗಳಿಗೆ ವಿರುದ್ದವಾಗಿರುವ ಪ್ರಚೋದನಕಾರಿ ಬರವನ್ನ ಬರೆದುಕೊಂಡಿದ್ದಾನೆ. ಆತನ ಮೊಬೈಲ್ ಸ್ಟೇಟ್ಸ್ ನಲ್ಲಿ ಬರೆಯಲಾಗಿರುವುದನ್ನ ಪೊಲೀಸರಿಗೆ ತಂದು ಒಪ್ಪಿಸಿರುವ ಸಾರ್ವಜನಿಕರು ಆ ಯುವಕನನ್ನ ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ನೂರಾರು ಸಂಖ್ಯೆಯ ಹಿಂದೂಗಳು ಪೊಲೀಸ ಠಾಣೆ ಎದುರು ಜಮಾಯಿಸುತ್ತಿದ್ದಾರೆ.