ಸುದ್ದಿಬಿಂದು ಬ್ಯೂರೋ
ಅಂಕೋಲಾ : ಹಿಂದೂಗಳ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕುವ ಮೂಲಕ ಶಾಂತಿ ಭಂಗಕ್ಕೆ ಯತ್ನಿಸಿದ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:-ಅಂಕೋಲಾದಲ್ಲಿ ಅನ್ಯಕೋಮಿನ ಯುವಕನಿಂದ ಪ್ರಚೋದನಕಾರಿ ಬರಹ
ಅಂಕೋಲಾ ಪಟ್ಟಣದ ಹುಲಿದೇವರವಾಡದ ಜಾಪರ್ ಎಂಬಾತನೆ ಬಂಧಿತ ಯುವಕನಾಗಿದ್ದಾನೆ.ಈತ ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ವಿರುದ್ಧ ಪ್ರಚೋದನಕಾರಿಯಾಗಿ ಬರೆದ ಬರವನ್ನ ಪೋಸ್ಟ್ ಮಾಡಿದ್ದ, ಇದರಿಂದ ಆಕ್ರೋಶಗೊಂಡ ಹಿಂದೂ ಯುವಕರು ಅಂಕೋಲಾ ಪೊಲೀಸ್ ಠಾಣೆ ಎದುರು ಜಮಾಯಿಸಿ ಆತನ ಬಂಧನ ಮಾಡುವಂತೆ ಠಾಣೆಗೆ ಮುತ್ತಿಗೆ ಹಾಕಿದ್ದರು. ಯುವಕನ ಬಂಧನ ಬಳಿಕ ಠಾಣೆಗೆ ಎದುರು ಜಮಾಯಿಸಿದ ಹಿಂದೂ ಯುವಕರು ವಾಪಸ್ ಆಗಿದ್ದಾರೆ.
ಆರೋಪಿ ಯುವಕನ ವಿರುದ್ದ ಸುವೋ ಮೋಟೋ ಕೇಸ್ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.