ಸುದ್ದಿಬಿಂದು ಬ್ಯೂರೋ
ಅಂಕೋಲಾ : ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ‌‌ ಆರೋಪಿಯನ್ನ ಬಂಧಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

ಪ್ರಕರಣದಲ್ಲಿ ಅಂಕೋಲಾ ತಾಲೂಕಿನ ಬೊಬ್ರುವಾಡ ನಮನ ನಿವಾಸಿಯಾಗಿರುವ ಪ್ರಶಾಂತ ಕಿಶೋರ ನಾಯ್ಕ, ಎಂಬಾತನನ್ನ ಕಳ್ಳತನ ‌ಪ್ರಕರಣದಲ್ಲಿ ಈಗ ಬಂಧಿಸಲಾಗಿದೆ. ಬಾಸಗೋಡದ ಹೊಗೆಯಲ್ಲಿರುವ ನಿವೃತ್ತ ಶಿಕ್ಷಕಿ ಶಾಂತಾ ಕೃಷ್ಣ ನಾಯಕ ಇವರ ಮನೆ ಬಾಗಿಲು ಮುರಿದು ಒಳ್ಳನುಗ್ಗಿದ ಕಳ್ಳರು‌ ಕಪಾಟಿನಲ್ಲಿ ಇದ್ದ 55 ಸಾವಿರ ರೂಪಾಯಿ ನಗದು, 15 ಸಾವಿರ ಮೌಲ್ಯದ ಬಂಗಾರದ ಕಿವಿ ಓಲೆ,‌ 2 ಸಾವಿರ ಮೌಲ್ಯದ ಬೆಲ್ಟ್ ದೀಪದ ಸಮಯಗಳು-04, ದೊಡ್ಡದು-02, ಸಣ್ಣದು-02, 1 ಸಾವಿರ ರೂಪಾಯಿ ಮೌಲ್ಯದ ಬೆಟ್ಟ ಲೋಟಗಳು 02 ಮತ್ತು ಬ್ಯಾಂಕ್ ಮತ್ತು ಷೋಸ್ಟ್ ಆಫೀಸ್ ದಾಖಲೆ ಪತ್ರವನ್ನ ಕಳ್ಳತನ ಮಾಡಲಾಗಿತ್ತು..

ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸಿ.ಆರ್. ನಂ: 174/2023 ಕಲಂ. 454, 457, 380 ಐ.ಪಿ.ಸಿ. ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪ್ರಶಾಂತ‌ ನಾಯ್ಕ ಈತ ಈ‌ ಹಿಂದೆ‌ ಸುಮಾರು 20ಕ್ಕೂ ಹೆಚ್ಚು ಕಳ್ಳತನ ‌ಪ್ರಕರಣದಲ್ಲಿ‌ ಭಾಗಿಯಾಗಿರುವ ಬಗ್ಗೆ ಪೊಲೀಸ್ ತನಿಖೆ‌ ವೇಳೆ ಬಾಯ್ ಬಿಟ್ಟಿದ್ದಾನೆ.

ಸಿಪಿಐ ಸಂತೋಷ‌ ಶೆಟ್ಟಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು,ಪಿ.ಎಸ್‌.ಐ. ಸುಹಾಸ್ ಆರ್. ಸಿಬ್ಬಂದಿಗಳಾದ ವೆಂಕಟ್ರಮಣ ನಾಯ್ಕ, ಶ್ರೀಕಾಂತ ಕಟಬರ, ಮನೋಜ, ಡಿ., ಆಸಿಫ್ ಕುಂತೂರು, ಗುರುರಾಜ ನಾಯ್ಕ ಹಾಗೂ ಸಮ್ ಮೊಖಾತಿ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
Suddibindu