ಸುದ್ದಿಬಿಂದು ಬ್ಯೂರೋ
ಭಟ್ಕಳ : ರಾತ್ರಿವೇಳೆ ವಿದ್ಯಾರ್ಥಿಗಳ ವಸತಿ ನಿಲಯದ ಒಳಗೆ ಏಕಾಏಕಿ ಆಗಿ ನುಗ್ಗಿದ್ದ ಪುಂಡರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಪಟ್ಟಣದ ಅಲ್ಪಸಂಖ್ಯಾತರ ಮೇಟ್ರೀಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಡಿಸೆಂಬರ್ 31ರಂದು ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದು ರಾತ್ರಿ 12ಗಂಟೆ ಸುಮಾರಿಗೆ ಯುವಕರ ಗುಂಪೊಂದು ವಿದ್ಯಾರ್ಥಿ ನಿಲಯದ ಎದುರುಗಡೆ ಕುಡಿದಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಆ ವಿದ್ಯಾರ್ಥಿ ನಿಯದಲ್ಲಿ ವಾಸವಾಗಿದ್ದ ಒಂದಿಷ್ಟು ವಿದ್ಯಾರ್ಥಿಗಳು ಕುಡಿದು ನಡೆದುಕೊಂಡು ಹೋಗುತ್ತಿರುವಾಗ ವಿದ್ಯಾರ್ಥಿಗಳು ಅವರನ್ನ ನೋಡಿ ಚುಡಾಯಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಓದಿ:- ಮಟ್ಕಾ ದಂಧೆಯ ಅಟ್ಟಹಾಸ

ಇದಕ್ಕೆ ಸಿಟ್ಟಾದ ಯುವಕರ ಗುಂಪು ಏಕಾಏಕಾಗಿ ವಿದ್ಯಾರ್ಥಿ ನಿಯದ ಒಳಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಯುವಕ ಗುಂಪು ತಮ್ಮ ಮೇಲೆ ಹಲ್ಲೆ ಮಾಡಲು ಬರುತ್ತಿದೆ ಎಂದು ಗಮನಿಸಿದ ವಿದ್ಯಾರ್ಥಿಗಳು ಒಳಗಡೆ ಓಡಿದ್ದಾರೆ. ಆಗ ಅಲ್ಲಿಗೆ ಹೋದ ಈ ಯುವಕ ಗುಂಪು ಕೈಗೆ ಸಿಕ್ಕ ಇಂಜಿನೀಯರಿಂಗ್ ವಿದ್ಯಾರ್ಥಿ ನವೀದ್ ಎಂಬಾತನಿಗೆ ಹಿಗ್ಗಾ ಮುಗ್ಗ ಥಳಕಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತಕ್ಷಣ ವಿದ್ಯಾರ್ಥಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿನಿಲಯಕ್ಕೆ ನುಗ್ಗಿ ಹಲ್ಲೆ ಮಾಡಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.

ವಿದ್ಯಾರ್ಥಿ ನಿಲಯದ ಒಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವುದಷ್ಟೆ ಅಲ್ಲದೆ ಪೀಠೋಪಕರಣಗಳನ್ನ ಧ್ವಂಸ ಮಾಡಿದ್ದಾರೆ. ವಿದ್ಯಾರ್ಥಿ ನಿಲಯ ಪಾಲಕ ನಾಗೇಂದ್ರ ಎಂಬುವವರಿಂದ ಭಟ್ಕಳ ಶಹರ ಠಾಣೆ ಯಲ್ಲಿ ದೂರು ದಾಖಲಾಗಿದ್ದು, ಪ್ರಮುಖ ಆರೋಪಿ ರಾಘವೇಂದ್ರ ಯಾನೆ ಬಾಬು ನಾಯ್ಕ ಮತ್ತು ನಂದನ ಜೈನ್ ಇಬ್ಬರನ್ನ ಬಂಧನ ಮಾಡಲಾಗಿದೆ.