ಸುದ್ದಿಬಿಂದು ಬ್ಯೂರೋ
ಧಾರವಾಡ : ದೇವರ ದರ್ಶನಕ್ಕೆ ಹೋಗಿದ್ದ ಇಬ್ಬರೂ ಯುವಕರು ಬೈಕ್ ಅಪಘಾತದಲ್ಲಿ ಮೃತರಾಗಿರುವ ಘಟನೆ ಧಾರವಾಡ ಜಿಲ್ಲೆಯ ಬೇಲೂರ ಸಮೀಪ ರಾಷ್ಟ್ರೀಯ ಹೆದ್ದಾರಿ 4ಯಲ್ಲಿ ನಡೆದಿದೆ.
ಶ್ರಾವಣ ಅಂಗವಾಗಿ ನರೇಂದ್ರ ಗ್ರಾಮದ ಬಳಿಯಿರುವ ಗುಡ್ಡದ ಬಸವಣ್ಣ ದೇವರ ದರ್ಶನಕ್ಕೆ ಹೋಗಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಧಾರುಣವಾಗಿ ಸಾವಿಗೀಡಾದ ಘಟನೆ ಬೇಲೂರ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಕೋಟೂರ ಗ್ರಾಮದ ನಾಗರಾಜ ಪರಕಳ್ಳಿ ಮತ್ತು ಗಂಗಾಧರ ಹೊಸವಾಳ ಎಂಬುವವರೆ ಮೃತ ಯುವಕರಾಗಿದ್ದಾರೆ.ಬೈಕಿನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ದುರ್ಘಟನೆ ನಡೆದಿದ್ದು, ಆಯತಪ್ಪಿ ಬಿದ್ದು ಸಾವಿಗೀಡಾದರೋ ಅಥವಾ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೋ ಎಂಬ ಖಚಿತತೆ ಗೊತ್ತಾಗಿಲ್ಲ.
ಇಬ್ಬರು ಯುವಕರ ಮೃತದೇಹಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿದ್ದು, ಭೀಕರತೆಯಿಂದ ಕೂಡಿವೆ.ಘಟನಾ ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ತೆರಳಿ,ಮುಂದಿನ ಕ್ರಮ ಜರುಗಿಸಿದ್ದಾರೆ.
ಸುದ್ದಿಬಿಂದು,