ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಗೋವಾ ಸಂಪರ್ಕ ಹೆದ್ದಾರಿಯಲ್ಲಿ ಪ್ಲೈಓವರ್ ನಿರ್ಮಾಣವಾದ ಬಳಿಕ ಇಲ್ಲಿನ ಠಾಗೋರ ಕಡಲತೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾದಂತಿದೆ.

ಕಾರವಾರ ನಗರದ ಪ್ರವೇಶಿಸುತ್ತಿರುವಂತೆ ಲಂಡನ್ ಬ್ರಿಡ್ಜ್ ನಿಂದ ಆರ್.ಟಿಓ ಕಚೇರಿಯವರಗೆ ಹೆದ್ದಾರಿಯಲ್ಲಿ ಪ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಈ ಮಾರ್ಗವಾಗಿ ಗೋವಾ ಹಾಗೂ ಮಂಗಳೂರು ಕಡೆ ಪ್ರಯಾಣಿಸುವ ನೂರಕ್ಕೆ 80 ರಷ್ಟು ಪ್ರವಾಸಿಗರು ಪ್ಲೈ ಓವರ್ ಮೇಲಿನಿಂದಲ್ಲೆ ಸಂಚಾರ ಮಾಡುತ್ತಿದ್ದಾರೆ. ಕಾರವಾರದ ಹೆದ್ದಾರಿ ಪಕ್ಕದಲ್ಲೇ ಸುಂದರವಾಗಿರುವ ಕಡಲತೀರವನ್ನ ಕಂಡರು ಸಹ ಯಾರು ಮೊದಲಿನಂತೆ ಇಲ್ಲಿಗೆ ಆಗಮಿಸುತ್ತಿಲ್ಲ.

ಈ ಮೊದಲು ಗೋವಾಕಡೆಯಿಂದ ಕಾರವಾರ ಪ್ರವೇಶಿಸಿ ಹೋಗುವವರಾಗಲಿ ಅಥವಾ ಮಂಗಳೂರು ಕಡೆಗಳಿಂದ ಗೋವಾ ಕಡೆ ಸಂಚರಿಸುವ ಹೆಚ್ಚಿನ ಪ್ರವಾಸಿಗರು ಪ್ಲೈಓವರ್ ಆಗುವ ಮೊದಲು ಕಡಲ ತೀರಕ್ಕೆ ಭೇಟಿ ನೀಡಿ ಒಂದಿಷ್ಟು ಸಮಯ ಕಳೆದು ಮುಂದು ಹೋಗುವುದು ರೂಡಿಯಲ್ಲಿತ್ತು. ಆದರೆ ಯಾವಾಗ ಈ ಪ್ಪೈ ಓವರ್ ಮೇಲೆ ಸಂಚಾರ ಆರಂಭವಾಯತ್ತೋ ಅಂದಿನಿಂದ ಇದುವರಗೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಆಗಿರುವುದು ಕಂಡು ಬರುತ್ತಿದೆ. ಅಷ್ಟೆ ಅಲ್ಲದೆ ಅದೆಷ್ಟೋ ಪ್ರವಾಸಿಗರು ಇಲ್ಲಿನ ಲಾಡ್ಜ್‌ಗಳಲ್ಲಿ ಉಳಿದು ಕಾರವಾರದ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳನ್ನ ವೀಕ್ಷಣೆ ಮಾಡಿ ಮುಂದೆ ಸಾಗುತ್ತಿದ್ದರು. ಇದರಿಂದಾಗಿ ಎಲ್ಲಾ ವರ್ಗದ ಜನರಿಗೂ ಒಂದಿಷ್ಟು ಉದ್ಯೋಗ್ಯವಾಗುತ್ತಿತ್ತು.ಈಗ ಅವೇಲ್ಲವೂ ಸಹ ನಿಂತೂ ಹೋಗಿದೆ.

ಪ್ರತಿ ವರ್ಷ ಸಹ ದಸರಾ ರಜೆ ಸೇರಿದಂತೆ ಸಾಲು ಸಾಲು ರಜೆಗಳು ಹಾಗೂ ವಾರಾದ್ಯಂತ ರಜೆಗಳಲ್ಲಿಯೂ ಕಾರವಾರವಾರ ಕಡಲತೀರದಲ್ಲಿ ಹೊರ ಜಿಲ್ಲೆ ಹಾಗೂ ರಾಜ್ಯದ ಪ್ರವಾಸಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದಾಗಿತ್ತು. ಈಗ ಅವೇಲ್ಲವೂ ಇಲ್ಲದಂತಾಗಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಇನ್ನೂ ಮುಂದೆ ಹೆಚ್ಚಿನ ಪ್ರವಾಸಿಗರನ್ನ ಕಾರವಾರ ಕಡತೀರದತ್ತ ಸೆಳೆಯಲು ಹೊಸ ಪ್ರಯತ್ನ ಮಾಡಬೇಕಿರುವುದು ಅನಿವಾರ್ಯವಾಗಿದೆ. ಪ್ಲೈ ಓವರ್ ಆಗಿರುವುದರಿಂದ ಇಲ್ಲ ಕಡಲತೀರ ಇದೆ ಎನ್ನುವುದು ಸಹ ಅಷ್ಟಾಗಿ ತಿಳಿಯದಂತಾಗಿದೆ.

ಪ್ಲೈಓವರ್ ಹತ್ತಿದ ನಂತರದಲ್ಲಿ ಕಂಡರು ಸಹ ತುಂಬಾ ದೂರದಲ್ಲಿ ಪ್ಲೈಓವರ್ ಕೊನೆಗೊಳ್ಳುವುದರಿಂದ ಯಾರೂ ಕೂಡ ವಾಪಸ್ ಇಲ್ಲಿಗೆ ಬರಲು ಮನಸ್ಸು ಮಾಡುವಂತೆ ಕಂಡು ಬರುತ್ತಿಲ್ಲ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನ ಆಕರ್ಷಿಸಲು ಪ್ಲೈ ಓವರ್ ಆರಂಭವಾಗುವ ಪೂರ್ವದಲ್ಲಿ ಇಲ್ಲಿ‌ನ ಪ್ರವಾಸಿ ಸ್ಥಳಗಳು ಇರುವ ದೊಡ್ಡ ದೊಡ್ಡ ಬ್ಯಾನರ್ ಸೇರಿದಂತೆ ಆಕರ್ಷಣಿಯ ಕಟೌಟ್ ಹಾಕಿ ಪ್ರವಾಸಿಗರನ್ನ ಆಕರ್ಷಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಗಮನಿಸಿ