ಸುದ್ದಿಬಿಂದು ಬ್ಯೂರೋ ವರದಿ
ಹಾವೇರಿ:ಚನ್ನಪ್ಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದ ಹಿನ್ನಲೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಪಿ ಯೋಗೇಶ್ವರ ರಾಜೀನಾಮೆ ಸಲ್ಲಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಶಿಗ್ಗಾವಿಯಲ್ಲಿ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಿಪಿ ಯೋಗೇಶ್ವರ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಈ ವಿಚಾರವಾಗಿ ನಿನ್ನೆ ತಡರಾತ್ರಿವರೆಗೆ ಹೊಂದಾಣಿಕೆ ಮಾಡುವ ಪ್ರಯತ್ನ ಮಾಡಲಾಗಿತ್ತು.ನಮ್ಮ ರಾಷ್ಟ್ರೀಯ ಅಧ್ಯಕ್ಷರು ಅವರ ಜೊತೆ ಮಾತನಾಡುತ್ತಾರೆ. ಬಳಿಕ ಸರಿಯಾಗುತ್ತೆ ಎನ್ನುವ ವಿಶ್ವಾಸವಿದೆ.ಯೋಗೇಶ್ವರಗೆ ವಿಧಾನ ಸಬೆ ನಿಲ್ಲಬೇಕು ಎನ್ನುವ ಯೋಚನೆಯಿದೆ. ಹೈಕಮಾಂಡ ಮಧ್ಯ ಪ್ರವೇಶ ಮಾಡಿದರೆ ಎಲ್ಲವೂ ಸರಿಯಾಗಲಿದೆ. ಸಿಪಿ ಯೋಗೇಶ್ಬರ ಕಾಂಗ್ರೇಸ್ ಸೇರಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಆ ವಿಚಾರ ನನಗೆ ಗೊತ್ತಿಲ್ಲ ಎಂದರು
ನಾನು ಯಾರಿಗು ಅಭ್ಯರ್ಥಿ ಮಾಡ್ತಿನಿ ಎಂದು ಭರವಸೆ ಕೊಟ್ಟಿರಲಿಲ್ಲ. ಪಕ್ಷ ತೀರ್ಮಾನ ಮಾಡುತ್ತೆ ಅದಕ್ಕೆ ಬದ್ದರಾಗಿರೋಣ ಎಂದು ಹೇಳಿದ್ದೆ, ನನ್ಮ ಮಗನಿಗೆ ನಿಲ್ಲಿಸುವ ಉದ್ದೇಶ ಇರಲಿಲ್ಲ, ಕ್ಷೇತ್ರ ಉಳಿಸಿಕೊಳ್ಳಲು ಹೈಕಮಾಂಡ್ ತೀರ್ಮಾನ ಮಾಡಿದೆ. ನಾನು ಹೋಗುಷ್ಟರಲ್ಲೆ ಹೈಕಮಾಂಡ್ ತೀರ್ಮಾನ ಮಾಡಿದೆ. ಕಾರ್ಯಕರ್ತರಿಗೆ ಹಲವಾರು ಸ್ಥಾನಮಾನ ಕೊಟ್ಟಿದ್ದೇನೆ. ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ಮ ದುಂಡಿ ಗೌಡರಿಗೆ ಕೊಡಿಸಿದ್ದೇನೆ. ಎಲ್ಲರ ಮನವೋಲೈಸಿ ಸರಿಪಡಿಸುತ್ತೇನೆ ಚುನಾವಣೆ ಗೆಲ್ಲೋದೊಂದೆ ನಮ್ಮ ಉದ್ದೇಶವಾಗಿದೆ ಎಂದರು.
ಗಮನಿಸಿ