ಬೆಂಗಳೂರು : ಚನ್ನಪ್ಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಇದೆ ವಿಚಾರವಾಗಿ ಅವರು ಹುಬ್ಬಳ್ಳಿಗೆ ಹೊರಟಿದ್ದು,ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಗೇಶ್ವರ್ ಅವರು, ಹುಬ್ಬಳ್ಳಿಗೆ ಹೋಗಿ ಸಭಾಪತಿಯವರನ್ನ ಭೇಟಿ ಮಾಡಿ ವಿಧಾನ ಪರಿಷತ್ ಸ್ಥಾನಕ್ಕೆ ಇಂದೇ ರಾಜೀನಾಮೆ ನೀಡುತ್ತೇನೆ.ಆದರೆ ಚುನಾವಣಾ ಕಣದಲ್ಲಿ ಇರುತ್ತೇನೆ ಎಂದಿದ್ದಾರೆ. ಎನ್ನುವ ಮೂಲಕ ಯೋಗೇಶ್ವರ ಅವರು ಕಾಂಗ್ರೇಸ್ ಸೇರ್ಪಡೆ ಆಗಲಿದ್ದಾರ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಸಾಕಷ್ಟು ಕೂತುಹಲ ಮೂಡಿಸಿದೆ.
ಆದರೆ ಈ ಬಗ್ಗೆ ಸಹ ಪ್ರತಿಕ್ರಿಯೇ ನೀಡಿರುವ ಯೋಗೇಶ್ವರ್ ಅವರು ನಾನು ಕಾಂಗ್ರೇಸ್ ಸೇರಲ್ಲ.ಆದರೆ ಚನ್ನಪ್ಪಣ ಕ್ಷೇತ್ರದಿಂದಲ್ಲೆ ಸ್ಪರ್ಧೆ ಮಾಡುತ್ತೇನೆ ಇನ್ನೂ ಸಮಯ ಇದೆ.ಪಕ್ಷ ಟಿಕೇಟ್ ಘೋಷಣೆ ಮಾಡಿದ್ದರೆ. ಪಕ್ಷದಿಂದಲ್ಲೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.
ಗಮನಿಸಿ