ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಶಿರೂರು ಗುಡ್ಡಕುಸಿತ ಘಟನೆಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಚಾಲಕ ಅರ್ಜುನ್ ಪತ್ತೆಗಾಗಿ ಲಾರಿ ಮಾಲೀಕ ಮುನಾಫ್ ಕೊನೆಕ್ಷಣದವರಗೂ ಶಿರೂರಿನಲ್ಲೆ ಇದ್ದು, ಚಾಲಕನಿಗಾಗಿ ಶ್ರಮಿಸಿದ್ದರು.ಆದರೆ ಅರ್ಜುನ್ ಶವ ಪತ್ತೆಯಾದ ಬಳಿಕ ಆನ ಕುಟುಂಬದವರು ಲಾರಿ ಮಾಲೀಕ ಮುನಾಫ್ ವಿರುದ್ದ ಪ್ರಕಣ ದಾಖಲಿಸಿತ್ತು.ಆದರೆ ಇದೀಗ ಆ ಎರಡು ಕುಟುಂಬದಲ್ಲಿನ ವೈಮನಸ್ಸು ಸುಖಾಂತ್ಯ ಕಂಡಿದೆ.
ಶಿರೂರಿನಲ್ಲಿ ನಡೆದ ದುರಂತದಲ್ಲಿ ಉತ್ತರಕನ್ನಡ ಜಿಲ್ಲೆಯ 9ಮಂದಿ ಸೇರಿ ಕೇರಳ ಹಾಗೂ ತಮಿಳುನಾಡು ಮೂಲದ ಚಾಲಕರು ಸೇರಿ ಹನ್ನೊಂದು ಮಂದಿ ಸಾವನ್ನಪ್ಪಿದ್ದರು. ಮೊಲದ ಹಂತದ ಕಾರ್ಯಚರಣೆಯಲ್ಲಿ 8ಮಂದಿ ಶವ ಪತ್ತೆಯಾಗಿದ್ದರು. ಉಳಿ ಮೂವರಾದ ಸ್ಥಳೀಯರಾದ ಜಗನ್ನಾಥ,ಲೊಕೇಶ ನಾಯ್ಕ ಹಾಗೂ ಕೇರಳದ ಲಾರಿ ಚಾಲಕ ಅರ್ಜುನ್ ಪತ್ತೆಯಾಗಿರಲ್ಲಿ. ಇವರೆಲ್ಲರ ಪತ್ತೆಯಾಗಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಸತೀಶ ಸೈಲ್ ಅವರ ಹೆಚ್ಚಿನ ಮುತುವರ್ಜಿಯಿಂದ ಕಾರ್ಯಚರಣೆ ಮೂರನೆ ಹಂತದವರಗೆ ತಲುಪುವಂತಾಗಿಯಿತ್ತು.
ಮೂರನೇ ಹಂತದ ಕಾರ್ಯಚರಣೆಯಲ್ಲಿ ಮುನಾಫ್‌ಗೆ ಸೇರಿದ ಭಾರತ್ ಬೆಂಜ್ ಲಾರಿ ಹಾಗೂ ಅದರ ಚಾಲಕ ಅರ್ಜುನ್ ಶವ ಘಟನೆ ನಡೆದ 71ದಿನದ ಬಳಿಕ ಪತ್ತೆ ಆಯತ್ತು. ಘಟನೆಯಲ್ಲಿ ಲಾರಿ ಹಾಗೂ ಚಾಲಕ ಸಿಲಿಕಿಕೊಂಡಿದ್ದಾನೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಘಟನೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಲಾರಿ ಮಾಲೀಕ ಮುನಾಫ್ ಚಾಲಕ ಶವ ಮನೆಗೆ ತೆಗೆದುಕೊಂಡು ಹೋಗುವ ತನಕ ಶಿರೂರಿನಲ್ಲೆ ಬಿಡುಬಿಟ್ಟಿರತ್ತಾರೆ.
ಎಲ್ಲಾ ಮುಗಿದ ಮೇಲೆ ಅರ್ಜುನ್ ಕುಟುಂಬಸ್ಥರು ಅದ್ಯಾವುದೋ ಒತ್ತಡಕ್ಕೆ ಒಳಗಾಗಿ ಅರ್ಜನ್ ಲಾರಿ ಮಾಲೀಕನಾಗಿರುವ ಮುನಾಫ್ ವಿರುದ್ಧವೆ ತಿರುಗಿಬಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗುತ್ತದೆ. ಇದರಿಂದ ಮುನಾಫ್ ಮನಸ್ಸಿಗೆ ಆಘಾತ ಉಂಟಾಗುತ್ತದೆ. ಕೊನೆಗೆ ಕೇರಳದ ಒಂದಿಷ್ಟು ಮುಖಂಡರ ಮುಂದಾಳ್ವತದಲ್ಲಿ ಅರ್ಜುನ್ ಕುಂಬದೊಂದಿಗೆ ಮಾತುಕತೆ ನಡೆಸಿ ಪ್ರಕರಣ ಸುಖಾಂತ್ಯ ಕಾಣುವಂತೆ ಮಾಡಲಾಗಿದೆ.
ಗಮನಿಸಿ