ಸುದ್ದಿಬಿಂದು ಬ್ಯೂರೋ
ಬೆಂಗಳೂರು :ವಿಶ್ವವನ್ನೇ ಬೆಚ್ಚಿಬಿಸಿದ್ದ ಕರೋನಾ ಮತ್ತೆ ರಾಜ್ಯ ಪ್ರವೇಶಿಸಿದ್ದು,ರಾಜ್ಯದಲ್ಲಿ ಕರೋನ ಕಟ್ಟಿಹಾಕಲು ಇದೀಗ ರಾಜ್ಯ ಸರಕಾರ ಮುಂದಾಗಿದ್ದು, ಇಂದಿನಿಂದಲೇ 60ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಮಾಡಿದೆ.

ರಾಜ್ಯದಲ್ಲಿ ಕೊರೋನಾದ ಹೊಸ ರೂಪಾಂತರ ತಳಿ ಹೆಚ್ಚದಂತೆ ಸರಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಇಂದಿನಿಂದ 60ವರ್ಷ ವಯಸ್ಸು ಮಲ್ಪಟವರಿಗೆ ಹಾಗೂ ಹೃದಯ ಸಂಬಂಧಿಸಿದ ಖಾಯಿಲೆಗೆ ಒಳಗಾದವರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳುವಂತೆ ಸೂಚಿಸಿದ. ಜನಸಂದನಿ ಇರುವ ಕಡೆಗೆ ಕೆಮ್ಮು ಇರುವವರು ಓಡಾಡದಂತೆ ಸಹ ಸೂಚಿಸಿದೆ.

ರಾಜ್ಯದಲ್ಲಿ ಸದ್ಯ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದಿರುವ ಸಚಿವರು, ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ‌ ಆರೋಗ್ಯ ಸಚಿವರು ಕೊರೋನಾ ಸೋಂಕು ಪತ್ತೆಯಾದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಆಸ್ಪತ್ರೆಗಳು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ ತಿಳಿಸಿದ್ದಾರೆ.