ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ತಾಲೂಕಿನ ಶಿರೂರು ಗುಡ್ಡಕುಸಿತ ಘಟನೆಗೆ ಸಂಬಂಧಿಸಿ ಮೂರನೇ ಹಂತದ ಕಾರ್ಯಚರಣೆ ನಡೆಸಲಾಗುತ್ತಿದ್ದು, ಇಂದು ಲಾರಿ ಒಂದರ ಇಂಜಿನ್ ಹಾಗೂ ಸ್ಕೂಟಿ ಪತ್ತೆ ಯಾಗಿದೆ…

ಕಳೆದ ಎರಡು ತಿಂಗಳ ಹಿಂದೆ ಶಿರೂರು ಗುಡ್ಡಕುಸಿತದಲ್ಲಿ ನಾಪತ್ತೆಯಾಗಿರುವ ಜಗನ್ನಾಥ, ಲೋಕೇಶ ಹಾಗೂ ಕೇರಳ‌ ಮೂಲದ ಅರ್ಜುನ್ ಹಾಗೂ ಭಾರತ್ ಬೆಂಜ್ ಲಾರಿ ಪತ್ತೆಗಾಗಿ ಕಳೆದ ಮೂರು ದಿನಗಳದ ಡ್ರೆಜ್ಜಿಂಗ್ ಯಂತ್ರ ಹಾಗೂ ಮುಳುಗು ತಜ್ಞ ಈಶ್ವರ ಮಲ್ಪೆ ತಂಡದಿಂದ ತೀವ್ರ ಕಾರ್ಯಚರಣೆ ನಡೆಸಲಾಗುತ್ತಿದ್ದು, ಇಂದು ನಡೆದ ಕಾರ್ಯಚರಣೆಯಲ್ಲಿ ಈಗಾಗಲೇ ಲಾರಿ ಒಂದರ ಇಂಜಿನ್ ಪತ್ತೆಯಾಗಿದ್ದು, ಕ್ರೇನ್ ಮೂಲಕ ಇಂಜಿನ್ ಮೇಲಕ್ಕೆತ್ತಲಾಗಿದೆ. ಆದರೆ ಪತ್ತೆಯಾಗಿರುವ ಇಂಜಿನ್ ಗ್ಯಾಸ್ ಟ್ಯಾಂಕರ್‌ನದ್ದು ಎಂದು ಹೇಳಲಾಗುತ್ತಿದೆ.

ಇನ್ನೂ ಘಟನೆಯಲ್ಲಿ ಕಣ್ಮರೆಯಾಗಿರುವ ಲಕ್ಷ್ಮಣ ನಾಯ್ಕ ಅವರಿಗೆ ಸೇರಿದ್ದು ಎನ್ನಲಾದ ಸ್ಕೂಟಿ ಒಂದು ನದಿಯಲ್ಲಿ ಪತ್ತೆಯಾಗಿದ್ದು, ಮುಳುಗು ತಜ್ಞ ಈಶ್ವರ ಮಲ್ಪೆ ಅವರು ನದಿಯಲ್ಲ ಸಿಲುಕಿಕೊಂಡಿರುವ ಸ್ಕೂಟಿಗೆ ಹಗ್ಗವನ್ನ ಕಟ್ಟು ಬಂದಿದ್ದು, ಸಂಜೆ ಬಳಿಕ ಅದನ್ನ ಮೇಲೆ ಎತ್ತುವ ಸಾಧ್ಯತೆ ಇದೆ. ಇದೆ ಜೊತೆಯಲ್ಲಿ ಭಾರತ್ ಬೆಂಜ್ ಲಾರಿಯಲ್ಲಿದ್ದ ಮೂರು ಕಟ್ಟಿಗೆ ದಿಮ್ಮಿಗಳು ಸಹ ಪತ್ತೆಯಾಗಿದೆ. ಈಗಾಗಲೇ ಸಿಕ್ಕಿರುವ ವಾಹನಗಳ ಎಲ್ಲಾ ಬಿಡಿಭಾಗಗಳು ಛಿದ್ರ ಛಿದ್ರವಾದ ಸ್ಥಿಯಲ್ಲಿ ಎಲ್ಲಾ ವಸ್ತುಗಳು ಪತ್ತೆಯಾಗಿದೆ..ಇನ್ನೂ ಸಹ ಕಾರ್ಯಚರಣೆ ಮುಂದುವರೆದಿದೆ…

ಇದನ್ನೂ ಓದಿ