ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಶಿರೂರು ಗುಡ್ಡಕುಸಿತ ಘಟನೆಯಲ್ಲಿ ಇನ್ನೂ ಮೂವರು ಕಣ್ಮರೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಈ ನಡುವೆ ಮೂಳೆಯೊಂದು ಪತ್ತೆಯಾಗಿದ್ದು, ಸಾಕಷ್ಟು ಅಚ್ಚರಿ ಮೂಡಿದೆ.

ಶಿರೂರು ಗುಡ್ಡಕುಸಿತದಲ್ಲಿ ಹನ್ನೊಂದು ಮಂದಿ ನಾಪತ್ತೆಯಾಗಿದ್ದು, ಇದರಲ್ಲಿ ಏಂಟು ಮಂದಿಯ ಶವ ಪತ್ತೆಯಾಗಿದ್ದು, ಇನ್ನೂ ಮೂವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಈ ವೇಳೆ ಇಂದು ಸಂಜೆ 7ಗಂಟೆ ಸುಮಾರಿಗೆ ಮೂಳೆ ಪತ್ತೆಯಾಗಿದ್ದು, ಇದು ಮಾನವನ ಮೂಳೆಯೊ ಅಥವಾ ಬೇರೆ ಯಾವ ಮೂಳೆಯೊ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಡಿಎನ್ಎ ತಪಾಸಣೆ ಬಳಿಕ ಇದು ಯಾರ ಮೂಳೆ ಎನ್ನುವುದು ತಿಳಿದು ಬರಬೇಕಿದೆ.

ಈ ಬಗ್ಗೆ ಸುದ್ದಿಬಿಂದು ವೆಬ್‌ಸೈಟ್‌ಗೆ ಮಾಹಿತಿ‌ ನೀಡಿದ ಶಾಸಕ ಸತೀಶ ಸೈಲ್ ಅವರು ಈಗಲೇ ಇದು ಯಾರ ಮೂಳೆ ಅಂತಾ ಹೇಳಲು ಸಾಧ್ಯವಿಲ್ಲ. ಆದರೆ ಕಾರ್ಯಚರಣೆ ಸಂದರ್ಭದಲ್ಲಿ ಮೂಳೆ ಸಿಕ್ಕಿದೆ.ಈ ಮೂಳೆಯನ್ನ ಡಿಎನ್‌ಎ ತಪಾಸಣೆಗಾಗಿ ಕಳುಹಿಸಲಾಗುವುದು ಅದು ಬಂದ ಬಳಿಕವೆ ಯಾರ ಮೂಳೆ ಎನ್ನುವುದು ಖಚಿತವಾಗಬೇಕಿದೆ ಎಂದಿದ್ದಾರೆ.

ಗಮನಿಸಿ