ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ :ರಾಜ್ಯವನ್ನೆ ಬೆಚ್ಚಿಬಿಳಸಿರುವ ಶಿರೂರು ಗುಡ್ಡಕುಸಿದ ಘಟನೆಯ ಕಾರ್ಯಚರಣೆ ಇಂದಿಗೂ ಮುಂದುವರೆದಿದ್ದು,‌ಮೂವರ ಶೋಧದ ನಡುವೆ ನಾಪತ್ತೆಯಾಗಿರುವ ಭಾರತ್ ಬೆಂಜ್ ಲಾರಿ ಪತ್ತೆಕಾರ್ಯ‌ ನಡೆಸುತ್ತಿರುವಾಗಲೇ ಇದೀಗ ಇನ್ನೊಂದು ಲಾರಿ ಇಂಜಿನ್‌ ಪ್ಲೇಟ್ ಪತ್ತೆಯಾಗಿರುವುದು ಇನ್ನಷ್ಟು ಅಚ್ಚರಿ ಮೂಡಿಸುವಂತಾಗಿದೆ..

ಹೌದು ಶಿರೂರು ದುರಂತದಲ್ಲಿ ಇಲ್ಲಿಯವರೆಗೆ ಮೂವರ ಶವ ಪತ್ತೆಯಾಗಬೇಕಿದ್ದು, ಗಂಗಾವಳಿ ನದಿಯಲ್ಲಿ ಕೇರಳ ಮೂಲದ ಅರ್ಜುನ್ ಚಾಲಕನಾಗಿರುವ ಭಾರತ್ ಬೆಂಜ್ ಲಾರಿ‌ ಮತ್ತು ಟಾಟಾ ಕಂಪನಿಯ ಗ್ಯಾಸ್ ಟ್ಯಾಂಕರ್ ಇದೆ ಎಂದು ಅಂದಾಜಿಸಲಾಗಿತ್ತು.ಆದರೆ ಭಾನುವಾರ(ನಿನ್ನೆ) ಕಾರ್ಯಚರಣೆಯಲ್ಲಿ ಲಾರಿ ಇಂಜಿನ್ ಒಂದರ ಪ್ಲೇಟ್ ಪತ್ತೆಯಾಗಿದ್ದು,ಅದರಲ್ಲಿ ಹಿಂದೂಜಾ ಗ್ರೂಪ್ ಎಂಬುದು ನಮೂದಾಗಿದೆ.ಅಶೋಕ ಲೇಲ್ಯಾಂಡ್ ಲಾರಿ ಹಿಂದೂಜಾ ಗ್ರೂಪಿಗೆ ಸೇರಿದ್ದಾಗಿದ್ದು, ಇದೀಗ ಗಂಗಾವಳಿ ನದಿಯಲ್ಲಿ ಮತ್ತೊಂದು ಲಾರಿ ಇದೇಯೇ ಎನ್ನುವ ಅನುಮಾನ ಮೂಡಿದೆ.!

ಘಟನೆಯಲ್ಲಿ ಹನ್ನೊಂದು ಮಂದಿ‌ ನಾಪತ್ತೆಯಾಗಿದ್ದು ಅದರಲ್ಲಿ ಏಂಟು ಮಂದಿಯ ಶವ ಪತ್ತೆಯಾಗಿದ್ದು ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದೀಗ ಲಾರಿ ಇಂಜಿನ್‌ ನಂಬರ್ ಪ್ಲೇಟ್ ಪತ್ತೆಯಾಗಿದ್ದು, ಆ ಲಾರಿಯಲ್ಲಿ ಎಷ್ಟು ಜನರಿದ್ದರು.ಎನ್ನುವ ಅನುಮಾನ ಕಾಡುತ್ತದೆ.ಅಕಸ್ಮಾತ್ ಇದು ಮತ್ತೊಂದು ಲಾರಿಯೇ ಆಗಿದ್ದರೆ. ನಾಪತ್ತೆಯಾದವರ ಸಂಖ್ಯೆ ಏರುಪೇರಾದರೂ ಯಾರೂ ಕೂಡ ಅದನ್ನ ಅಲ್ಲೆಗೇಳೆಯುವಂತ್ತಿಲ್ಲ..!

ಲಾರಿ ನಾಪತ್ತೆ ದೂರು ಯಾಕಿಲ್ಲ..?
ಈಗ ಗಂಗಾವಳಿ ನದಿಯಲ್ಲಿ ಲಾರಿ‌‌ ಒಂದರ ಇಂಜಿನ್ ಪ್ಲೇಟ್ ಪತ್ತೆತಾಗಿದ್ದು,ಈ ಲಾರಿ ತಮಿಳುನಾಡು ಮೂಲದ್ದು ಎಂದು ಹೇಳಲಾಗುತ್ತಿದೆ.ಆದರೆ ಈವರೆಗೆ ಲಾರಿ ನಾಪತ್ತೆಯಾಗಿದ್ದಲ್ಲಿ, ಲಾರಿ ಚಾಲಕ ನಾಪತ್ತೆಯಾದ ಬಗ್ಗೆ ಎಲ್ಲಿಯೂ ದೂರು ದಾಖಲಾದ ಬಗ್ಗೆ ಮಾಹಿತಿ ಇಲ್ಲ.ಹೀಗಾಗಿ ಗಂಗಾವಳಿ ನದಿಯಲ್ಲಿ ಪತ್ತೆಯಾಗಿರುವ ಇಂಜಿನ್ ನಂಬರ್ ಪ್ಲೇಟ್ ಮತ್ತಷ್ಟು ನಿಗೂಢ ಸೃಷ್ಠಿಸಿದೆ.ಗಂಗಾವಳಿ ನದಿ ಬಗೆದಷ್ಟು ರಹಸ್ಯಗಳೆ ಸೃಷ್ಟಿಯಾಗುತ್ತಿದ್ದು, ಪ್ರಶ್ನೆಗಳು ಹುಟ್ಟುತ್ತಲೆ ಇವೆ. ಆದರೆ ಉತ್ತರ ಮಾತ್ರ ಮರಿಚಿಕೆಯಾಗಿದೆ.

ಗಮನಿಸಿ