ಕಾರವಾರ : ದೇಶದ ಪ್ರತಿಷ್ಠಿತ ರಕ್ಷಣಾ ಯೋಜನೆಯಾಗಿರುವ ನೌಕಾಲೆಯ (Naval base) ಆಸುಪಾಸಿನಲ್ಲಿ ರಾತ್ರಿ ಸಮಯದಲ್ಲಿ ಡ್ರೋಣ ಕ್ಯಾಮರಾ ಹಾರಿಸಿರುವ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ(uttara kannda) ಕಾರವಾರದ ಸಮೀಪದ ಅರಗಾ ವಕ್ಕನಳ್ಳಿ ಬಳಿಯ ಕದಂಬ ನೌಕಾ ನೆಲೆಯ ರಕ್ಷಣಾ ಯೋಜನಾ ಪ್ರದೇಶದ ಸಮೀಪದಲ್ಲಿ ಈ ಡ್ರೋಣ ಕ್ಯಾಮರಾ (Drone camera) ಹಾರಿಸಲಾಗಿದೆ.ಅದರಲ್ಲೂ ರಾತ್ರಿ ವೇಳೆಯಲ್ಲಿ ಯಾಕಾಗಿ ಇದನ್ನ ಹಾರಿಸಿದ್ದಾರೆ.ಎನ್ನುವ ಅನುಮಾನ ಎದುರಾಗಿದೆ. ಇಷ್ಟು ದಿನ ಹನಿಟ್ರ್ಯಾಪ್ ಮೂಲಕ ಮಾಹಿತಿ ಕಲೆ ಹಾಕುತ್ತಿದ್ದವರು ಈಗ ಡ್ರೋನ್ ಮೂಲಕ ಮಾಹಿತಿ ಕಲೆ ಹಾಕುವ ಪ್ರಯತ್ನಕ್ಕೆ ಇಳಿದಿದ್ದಾರ..?ಹೀಗೆ ಹಲವು ಅನುಮಾನಗಳು ಎದುರಾಗಿದೆ.
ವಕ್ಕನಳ್ಳಿ ಭಾಗದಿಂದ ಐಎನ್ಎಸ್ ಪತಾಂಜಲಿ (INS Patanjali)ಆಸ್ಪತ್ರೆ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಿಸಲಾಗಿದೆ ಎನ್ನಲಾಗಿದೆ.ಬೈಕ್ ಅಥವಾ ಸನ್ ರೂಫ್ ಕಾರ್ ಮೂಲಕ ತೆರಳುತ್ತಾ ಈ ಡ್ರೋನ್ ಆಪರೇಟ್ ಮಾಡಿರುವ ಸಂಶಯ ವ್ಯಕ್ತಚಾಗಿದ್ದು,ಸುರಕ್ಷತೆಯ ದೃಷ್ಟಿಯಿಂದ ನೌಕಾ ನೆಲೆ ಪ್ರದೇಶದಲ್ಲಿ ಡ್ರೋನ್ ಹಾಗೂ ಕ್ಯಾಮರಾ ಬಳಕೆಗೆ ನಿಷೇಧಸಲಾಗಿತ್ತು, ಇದರ ಹೊರತಾಗಿಯೂ ಡ್ರೋನ್ ಹಾರಿರೋದ್ರಿಂದ ವಿವಿಧ ಗುಪ್ತಚರ ಸಂಸ್ಥೆಗಳು ಹುಡುಕಾಟಕ್ಕಿಳಿದೆ.
ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಈ ಡ್ರೋಣ್ ಹಾರಾಟದ ದೃಶ್ಯ ಸೆರೆಯಾಗಿದೆ ಎನ್ನಲಾಗಿದ್ದು, ಸೆರೆ ಸಿಕ್ಕ ವಿಡಿಯೋವನ್ನ ಸ್ಥಳೀಯರು ನೌಕಾನೆಲೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.ಇದರಿಂದ ಎಚ್ಚೆತ್ತು ಕೊಂಡಿರುವ ನೌಕಾ ನೆಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆನ್ನಲಾಗಿದ್ದು ನಿಖರ ಮಾಹಿತಿ ಕಲೆ ಹಾಕಲು ನೌಕಾಪಡೆ, ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಗಳು ಮುಂದಾಗಿದೆ.
ಈಗಾಗಲೇ ಅರಣ್ಯ ಇಲಾಖೆ, ಹೆದ್ದಾರಿ ಕಾಮಗಾರಿ ನಡೆಸ್ತಿರುವ ಐಆರ್ ಬಿ ಹಾಗೂ NHAI ಕೂಡಾ ಡ್ರೋನ್ ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆನ್ನಲಾಗಿದೆ. ಸಂಶಯದ ಹಿನ್ನೆಲೆಯಲ್ಲಿ ನೌಕಾಪಡೆ ಹಾಗೂ ಗುಪ್ತಚರ ಇಲಾಖೆಗಳಿಂದ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ.
ಇತ್ತೀಚೆಗಷ್ಟೇ ಹನಿಟ್ರ್ಯಾಪ್‌ಗೆ ಒಳಗಾಗಿ ನೌಕಾನೆಲೆ ಮಾಹಿತಿ ನೀಡ್ತಿದ್ದ ಮೂವರನ್ನು NIA ತನಿಖೆಗೆ ಒಳಪಡಿಸಿತ್ತು. ಈ ಘಟನೆ ಮಾಸುವ ಮುನ್ನವೇ ರಾತ್ರಿ ಸಮಯದಲ್ಲಿ ಡ್ರೋಣ ಹಾರಿಸಿರುವುದು ಗುಪ್ತಚರ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ.
ಗಮನಿಸಿ