ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಮೂರನೇ ಹಂತದ ಕಾರ್ಯಚರಣೆ ವೇಳೆ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದ್ದ ಮನುಷ್ಯನ ಮೂಳೆಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿತ್ತು. ಆದರೆ ಅಂಕೋಲಾದ ವೈದ್ಯ ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ DNA ವರದಿ ವಿಳಂಬಕ್ಕೆ ಕಾರಣವಾಗುತ್ತಿದೆ. ಎನ್ನಲಾಗಿದೆ.
ಪತ್ತೆಯಾಗಿದ್ದ ಮನುಷ್ಯನ ಎರಡು ಮೂಳೆಯನ್ನ DNA ಪರೀಕ್ಷೆಗಾಗಿ ಹುಬ್ಬಳ್ಳಿಯ ಕ್ರಿಮ್ಸ್‌ಗೆ ಕಳುಹಿಸಲಾಗಿದೆ. ಆದರೆ ಅಲ್ಲಿಗೆ ಕಳುಹಿಸುವ ಮೊದಲು ಅಂಕೋಲಾ ಆಸ್ಪತ್ರೆಯಲ್ಲಿ ಪತ್ತೆಯಾಗಿರುವ ಮೂಳೆಗೆ ಹೆಚ್ಚಿನ ಪ್ರಮಾಣದಲ್ಲಿ ದ್ರಾವಣ ಹಾಕಿದ್ದರಿಂದ DNA ನೆಗಟೀವ್ ತೋರಿಸಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ರವರು ಡಿ.ಎನ್.ಎ ರಿಪೋರ್ಟ್ ನೆಗಟೀವ್ ಬಂದಿದೆ.ದ್ರಾವಣ ಹೆಚ್ಚು ಹಾಕಿದ್ದರಿಂದ ಈರೀತಿ ಆಗಿದ್ದು ಮೊತ್ತೊಮ್ಮೆ DNA ಪರೀಕ್ಷೆ ಮಾಡಬೇಕಿದೆ.ಇನ್ನೂ ಸ್ವಲ್ಪ ದಿನ ತೆಗೆದುಕೊಳ್ಳಬಹುದು ಎಂದಿದ್ದಾರೆ.
ಗಮನಿಸಿ