ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಅವರಿಬ್ಬರೂ ಅಕ್ಕಪಕ್ಕದ ಗ್ರಾಮದಲ್ಲಿ ಹುಟ್ಟಿ ಬೆಳೆದವರು, ಉದ್ಯೋಗಕ್ಕಾಗಿ ಊರಿಂದ ದೂರ ಇದ್ದವರು, ಉದ್ಯೋಗದ ಮೂಲಕ ಕೋಟ್ಯಾಧಿಪತಿಗಳಾಗಿದ್ದವರು. ಆದರೆ ಒಂದು ಹೆಣ್ಣಿಗಾಗಿ ಇದೀಗ ಓರ್ವ ಉದ್ಯಮಿಯ ಹೆಣ ಬಿದ್ದಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಇಬ್ಬರೂ ಆರೋಪಿಗಳನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಹತ್ಯೆಯಾದ ವಿನಾಯಕ ನಾಯ್ಕ ಹಾಗೂ ಹತ್ಯೆಗೆ ಸುಫಾರಿ ನೀಡಿದ್ದ ಉದ್ಯಮಿ ಇಬ್ಬರೂ ಕೂಡ ಅಕ್ಕಪಕ್ಕದ ಊರಿನವರು, ಕೊಲೆಗೆ ಸುಫಾರಿ ನೀಡಿದ್ದ ದೇವಗುರು ಪತ್ನಿಯ ಜೊತೆ ಹತ್ಯೆಯಾದ ವಿನಾಯಕಗೆ ಅನೇಕ ವರ್ಷಗಳ ಹಿಂದಿನಿಂದಲೂ ಗೆಳತನವಿತ್ತು ಎನ್ನಲಾಗಿದೆ. ಕೊಲೆಗೆ ಸುಫಾರಿ ನೀಡಿದ್ದ ದೇವಗುರು ಪತ್ನಿ ಕೇಂದ್ರ ಸರಕಾರದ ಇಲಾಖೆಯಲ್ಲಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಈಕೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆಗಾಗ ವರ್ಗಾವಣೆ ಆಗುತ್ತಿದ್ದಳು, ಹೀಗಿರುವಾಗ ಆಕೆಗೆ ವಿನಾಯಕ ವಾಸವಾಗಿರುವ ಪುಣೆಗೆ ವರ್ಗಾವಣೆ ಆಗುತ್ತಂತೆ ಆಗ ಇಬ್ಬರ ಭೇಟಿ ನಡೆದು ಹಳೆಯ ಗೆಳೆತನ ಹಾಗೆಯೇ ಮುಂದುವರೆಯುತ್ತದೆ ಎನ್ನಲಾಗಿದೆ. ಅವರಿಬ್ಬರ ನಡುವೆ ಗೆಳತನ ಇರುವ ಬಗ್ಗೆ ದೇವಗುರುಗೆ ಅನುಮಾನ ಕಾಡಿರುತ್ತದೆ ಎನ್ನಲಾಗಿದೆ.
ಹೀಗಿರುವಾಗ ಒಮ್ಮೆ ವಿನಾಯಕನ ಪತ್ನಿ ಒಂದು ದಿನ ದೇವಗುರುಗೆ ಪೋನ್ ಮಾಡಿ ತನ್ನ ಪತಿಯೊಂದಿಗೆ ದೇವಗುರು ಪತ್ನಿಯ ಗೆಳತನ ಇರುವ ವಿಚಾರವನ್ನು ತಿಳಿಸಿದ್ದಾಳಂತೆ.ಇದರಿಂದಾಗಿ ತನ್ನ ಪತ್ನಿಗೆ ವಿನಾಯಕ ಜೊತೆ ಗೆಳತನ ಇರುವುದು ದೇವಗುರುಗೆ ಪಕ್ಕಾ ಆಗತ್ತದೆ. ನಂತರ ವಿನಾಯಕನ ಪತ್ನಿ ಹಾಗೂ ದೇವಗುರು ನಡುವೆಯೂ ಸಹ ಗೆಳತನ ಉಂಟಾಗಿ ಅದು ಸಂಬಂಧದವರೆಗೆ ತಲುಪತ್ತದೆ ಎನ್ನಲಾಗಿದೆ. ಹೀಗಾಗಿ ದೇವಗುರು ಆತನ ಪತ್ನಿಯ ಗೆಳತನ ಮಾಡಿಕೊಂಡು ವಿನಾಯಕನ ಹತ್ಯೆ ಮಾಡಿದರೆ ಇಬ್ಬರೂ ಸದಾ ಒಂದಾಗಿ ಇರಬಹುದು ಎಂದು ವಿನಾಯಕ ಹತ್ಯೆ ಮಾಡಿದ್ದರಾ..? ಎನ್ನುವ ಊಹಾಪೋಹಗಳು ಕೇಳಿ ಬರುತ್ತಿದೆ…
ಹತ್ಯೆಗೆ ಕಾರ್ಮಿಕರನ್ನೇ ಬಳಸಿಕೊಂಡ ದೇವಗುರು
ಮೊದಲೇ ವಿನಾಯಕನ ಹತ್ಯೆ ಮಾಡಬೇಕು ಅಂದುಕೊಂಡ ಈತನಿಗೆ ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಬಳಸಿಕೊಂಡು ವಿನಾಯಕನ ಹತ್ಯೆ ಮಾಡೋದಕ್ಕೆ ಮುಂದಾದ್ದರ.?, ಹಣಕೋಣಕ್ಕೆ ಬಂದ ವಿನಾಯಕ ವಾಪಸ್ ಪುಣೆಗೆ ಹೋಗುವ ಸಮಯದಲ್ಲಿ ತನ್ನದೆ ಕಾರ್ಮಿಕರ ಮೂಲಕ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. ಹತ್ಯೆ ನಡೆಯುವ ಎರಡು ದಿನ ಮೊದಲೆ ಸುಪಾರಿ ನೀಡಿದಾನ್ನೆ ಎನ್ನಲಾದ ಉದ್ಯಮಿ ಕೂಡ ಗೋವಾದಿಂದ ಹಣಕೋಣಕ್ಕೆ ಬಂದಿದ್ದು, ಆದರೂ ಊರಲ್ಲಿರುವ ಮನೆಗೆ ಹೋಗದೆ ಬೇರೆ ಎಲ್ಲೋ ಉಳಿದುಕೊಂಡು ಕೊಲೆಯ ಸ್ಕೇಚ್ ರೂಪಿಸಿ ಕೊನೆಗೂ ವಿನಾಯಕನ ಹತ್ಯೆ ಮಾಡಿಸಿ ವಾಪಸ್ ಗೋವಾಕ್ಕೆ ಪರಾರಿಯಾಗಿದ್ದ ಎನ್ನುವ ಮಾತುಗಳು ಕೇಳಿ ಬರಲಾರಂಬಿಸಿದೆ. ಎಲ್ಲದಕ್ಕೂ ಪೊಲೀಸ್ ತನಿಖೆಯ ನಂತರದಲ್ಲೆ ಸ್ಪಷ್ಟ ಉತ್ತರ ಸಿಗಬೇಕಿದೆ..
ಗುರರಾಜ್‌ಗೆ ಪೆಟ್ಟುಹಾಕಿದ್ದನಂತೆ ವಿನಾಯಕ
ಹತ್ಯೆಯಾದ ವಿನಾಯಕ ಹಾಗೂ ಮೊದಲಿನಿಂದಲ್ಲು ಪರಿಚಯಸ್ಥರು ಎನ್ನಲಾಗಿದೆ. ದೇವಗುರು ಜೊತೆ ತನ್ನ ಪತ್ನಿ ಗೆಳತ ಇಟ್ಟುಕೊಂಡಿದ್ದಾಳೆ ಎನ್ನುವ ಬಗ್ಗೆ ಗುಮಾನಿ ಇದ್ದ ವಿನಾಯಕ ಕೆಲ ತಿಂಗಳ ಹಿಂದೆ ಆ ಉದ್ಯಮಿಗೆ ನಾಲ್ಕು ಪೆಟ್ಟು ಕೂಡ ಹಾಕಿದ್ದ ಎನ್ನುವ ಮಾತುಗಳಿದೆ.ಇದೆ ಕಾರಣಕ್ಕೆ ಸಿಟ್ಟಾಗಿದ್ದ ಆತ ವಿನಾಯಕನಿಗೆ ಒಂದು ಗತಿ ಕಾಣಿಸಲೇ ಬೇಕು ಅಂತಾ ಈ ಕೃತ್ಯ ನಡೆಸಿದ್ದಾನೆ ಎನ್ನುವ ಮಾತುಗಳು ಘಟನೆಯ ನಂತರದಲ್ಲಿ ಹೊರಬರಲಾರಂಭಿಸಿದೆ.
ಘಟನೆ ನಡೆದು ಅದೆಷ್ಟೋ ಸಮಯದ ಬಳಿಕ ಪತ್ನಿಯ ಚಿರಾಟ..?
ಅಂದು ಬೆಳಿಗ್ಗೆ 4 ಹೊತ್ತಲ್ಲಿ ವಿನಾಯಕ ಹತ್ಯೆ ನಡೆದಿದೆ ಎನ್ನಲಾಗಿದ್ದು, ಹಂತಕರು ಕಾರವಾರದ ಗಡಿ ದಾಟಿ ಹೋದ ನಂತರದಲ್ಲಿ ಹತ್ಯೆಯಾದ ವಿನಾಯಕ ನಾಯ್ಕ( ರಾಜು) ಪತ್ನಿ ಚೀರಾಡಿಕೊಂಡು ಅಕ್ಕಪಕ್ಕದವರಿಗೂ ವಿಚಾರ ತಿಳಿಸಿದ್ದಾಳೆ ಎನ್ನಲಾಗಿದೆ.
ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಹಂತಕರ ಕಾರು
ವಿನಾಯಕ ಹತ್ಯೆ ನಡೆಸಲು ಹಂತಕರು ಕಾರಲ್ಲಿ ಬಂದಿದ್ದರು. ಕೃತ್ಯೆ ನಡೆಸಿ ವಾಪಸ್ ಆಗುವ ವೇಳೆ ಕಾರಿನ ದೃಶ್ಯಾವಳಿ ಹಣಕೋಣ ಸಮೀಪದ ಬ್ಯಾಂಕ್ ಒಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಅದೇ ಆಧಾರದ ಮೇಲೆ ಮಾಜಾಳಿ ಚೆಕ್ ಪೋಸ್ಟಿನಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದ ವೇಳೆ ಹಣಕೋಣದಿಂದ ತೆರಳಿದ ಕಾರಿನ ನಂಬರ್ ಹಾಗೂ ಮಾಜಾಳಿ ಚೆಕ್ ಪೋಸ್ಟಿನಲ್ಲಿ ಪಾಸ್ ಆಗಿದ್ದ ಕಾರಿನ ನಂಬರ್ ಹೋಲಿಕೆಯಾಗಿದೆ. ಹೀಗಾಗಿ ಕಾರವಾರ ಪೊಲೀಸರು ಅದೇ ಕಾರ ನಂಬರ್ ಜಾಡು ಹಿಡಿದು ತನಿಖೆ ನಡೆಸಿದ ವೇಳೆ ಆ ಕಾರು ಗೋವಾ ಲೋಲೆಂನ ಸೇರಿದ್ದು ಎನ್ನುವುದು ಖಾತ್ರಿಯಾಗಿದೆ.
ತನಿಖೆ ವೇಳೆ ಗೋವಾದ ವ್ಯಕ್ತಿ ಆ ಕಾರನ್ನು ಹಳಗಾದ ಅಶೋಕ ಎಂಬುವವರಿಗೆ ಮಾರಾಟ ಮಾಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆಯಂತೆ. ಕಾರು ಖರೀದಿ ಮಾಡಿದ್ದ ಅಶೋಕ ಎಂಬುವವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅಶೋಕ ಸಹೋದರ ಇದೇ ದೇವಗುರುಗೆ ಕಾರನ್ನು ಎರಡು ದಿನದ ಮಟ್ಟಿಗೆ ಪಡೆದುಕೊಂಡಿರುವ ಬಗ್ಗೆ ಅಶೋಕ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದನಂತೆ. ಈ ವಿಚಾರ ತಿಳಿಯುತ್ತಿದ್ದಂತೆ ಕೊಲೆಗೆ ಸುಫಾರಿ ನೀಡಿದ್ದ ಉದ್ಯಮಿ ಇದೀಗ ತನ್ನ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಒಂದು ದಿನ ತಡವಾಗಿದ್ದರೂ ಹಂತಕರು ಪರಾರಿ..!
ಈ ಪ್ರಕರಣದಲ್ಲಿ ಪೊಲೀಸರೇನಾದರೂ ಸ್ವಲ್ಪ ವಿಳಂಬ ಮಾಡಿದರೂ ಕೂಡ ಹಂತಕರು ಆಸ್ಸಾಂ ಹಾಗೂ ಬಿಹಾರಕ್ಕೆ ಪರಾರಿಯಾಗಲು ಮುಂದಾಗಿದ್ದರು.ಅವರ ಸುಳಿವು ಸಿಗುತ್ತಿದ್ದಂತೆ ಪೊಲೀಸರು ತನಿಖೆ ಚುರುಗೊಳಿಸಿದ್ದು,ಪರಾರಿಯಾಗಲು ಮುಂದಾಗಿದ್ದ ಹಂತಕರನ್ನು ಏಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ. ಎನ್ನಲಾಗಿದೆ.
ಗಮನಿಸಿ