ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಥ ಉತ್ತರ ಕನ್ನಡ ಜಿಲ್ಲೆಯ ಮೂಲಕ ಗೋವಾ ಗಡಿ ಪ್ರವೇಶ ಮಾಡಿದ್ದು ಗೋವಾ ರಾಜ್ಯದ ಕಾಣಕೋಣನಲ್ಲಿ ಗೋವಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
.

ಗೋವಾ ದಲ್ಲೂ ಕನ್ನಡದ ಕಂಪು ಹರಿಸುತ್ತಿರುವ ಗೋವಾ ರಾಜ್ಯದ ಕನ್ನಡಿಗ ಕನ್ನಡ‌ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಣ್ಣ ಮೇಟಿ ನೇತ್ರತ್ವದಲ್ಲಿ ಕನ್ನಡ ರಥಕ್ಕೆ ಅದ್ದೂರಿ ಸ್ವಾಗತ ಸಿಕ್ಕಿತು, ಗೋವಾ ರಾಜ್ಯದ ಗಡಿ ತಾಲೂಕಿನಲ್ಲಿ ಅದ್ದೂರಿ ಸ್ವಾಗತಿಸಿದ್ದು ಕೊಂಕಣಿ ನಾಡಲ್ಲಿ ಕನ್ನಡ ಕಲರವ ಮೂಡಿದೆ.

ಗೋವಾ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸೇರಿ ಪದಾಧಿಕಾರಿಗಳು ಮತ್ತು ಅನೇಕ ಗಣ್ಯಾತಿ ಗಣ್ಯರು ಅದ್ದೂರಿ ಸ್ವಾಗತ ಕೋರಿದರು, ಕನ್ನಡ ರಥಕ್ಕೆ ಆರತಿ ಬೆಳಗಿ ಪೂಜೆ ಪುನಸ್ಕಾರ ಮಾಡಲಾಯಿತು, ಜತೆಗೆ ಕಾಣಕೋಣ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು

ಕನ್ನಡಾಂಬೆಯ ರಥವನ್ನ ಸ್ವಾಗತಿಸಿ ಕೊಂಕಣಿ ನಾಡಲ್ಲಿ ಕನ್ನಡದ ಕಂಪು ಹರಿಸಿದ ಗೋವಾ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳನ್ನ ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಕೊಂಡಾಡಿದ್ದಾರೆ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ‌ಎನ್ ವಾಸರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,

ಗೋವಾ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯದಕ್ಷ ಸಿದ್ದಣ್ಣ ಮೇಟಿ ನೇತ್ರತ್ವದಲ್ಲಿ ಕಾರ್ಯಕ್ರಮ ನಡೆದಿದ್ದು ಹೆಮ್ಮೆಯ ವಿಚಾರ ಅಂತಿದ್ದಾರೆ ಗೋವಾ ಕನ್ನಡಿಗರು

ಗಮನಿಸಿ