ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಥ ಉತ್ತರ ಕನ್ನಡ ಜಿಲ್ಲೆಯ ಮೂಲಕ ಗೋವಾ ಗಡಿ ಪ್ರವೇಶ ಮಾಡಿದ್ದು ಗೋವಾ ರಾಜ್ಯದ ಕಾಣಕೋಣನಲ್ಲಿ ಗೋವಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು..
ಗೋವಾ ದಲ್ಲೂ ಕನ್ನಡದ ಕಂಪು ಹರಿಸುತ್ತಿರುವ ಗೋವಾ ರಾಜ್ಯದ ಕನ್ನಡಿಗ ಕನ್ನಡಸಾಹಿತ್ಯ ಪರಿಷತ್ತು ಕನ್ನಡ ರಥಕ್ಕೆ ಅದ್ದೂರಿ ಸ್ವಾಗತ ಸಿಕ್ಕಿತು, ಈ ಸಂದರ್ಭದಲ್ಲಿ ಹಾಜರಿದ್ದ ಗೋವಾ ರಾಜ್ಯದ ಕರ್ನಾಟಕ ಸೆಲ್ ಬಿಜೆಪಿ ನಾಯಕ ಮುರುಳಿ ಶೆಟ್ಟಿಯವರು ಕನ್ನಡ ರಥಕ್ಕೆ ಸ್ವಾಗತಿಸಿ ಹೂ ಅರ್ಪಿಸಿದರು,
ಬಳಿಕ ಮಾತಾಡಿದ ಅವರು ಗೋವಾ ರಾಜ್ಯಕ್ಕೆ ಕನ್ನಡ ರಥ ಬಂದಿದ್ದು ಹೆಮ್ಮೆಯ ವಿಚಾರ, ಕೊಂಕಣಿನಾಡಲ್ಲಿ ಕನ್ನಡ ಕಂಪು ಹರಿಸಲಾಗುತ್ತಿದೆ, ಕನ್ನಡದ ಅನೇಕ ಕಾರ್ಯಾಕ್ರಮಗಳನ್ನ ಇಲ್ಲಿ ಹಮ್ಮಿಕೊಂಡು ಮುಂದೆ ಕನ್ನಡ ಭಾಷೆ ಗೋವಾದಲ್ಲಿ ಉಳಿಸುವ ಪ್ರಯತ್ನ ಮಾಡುತ್ತೆವೆ ಎಂದ್ರು…
ಗಮನಿಸಿ