ಸುದ್ದಿಬಿಂದು ಬ್ಯೂರೋ ವರದಿ
ದಾವಣಗೆರೆ: ಕುಡಿತದ ಚಟಕ್ಕೆ ಪತ್ನಿಗೆ ಬರುವ ಗೃಹಲಕ್ಷ್ಮಿ ಹಣ ಬಿಡಿಸುಕೊಡುವಂತೆ ಪತಿ ಪತ್ನಿಗೆ ಪೀಡಿಸುತ್ತಿದ್ದು, ಹಣ ಕೊಟ್ಟಿಲ್ಲವೆಂದು ಪತಿ ಮಹಾಶಯ ಪತ್ನಿಯನ್ನೆ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಉಜ್ಜಪ್ಪರವಡೇರಹಳ್ಳಿಯಲ್ಲಿ ನಡೆದಿದೆ.

ಸತ್ಯಮ್ಮ (40) ಕೊಲೆಯಾದ ಮಹಿಳೆಯಾಗಿದ್ದಾಳೆ.ಕುಡಿತದ ಚಟಕ್ಕೆ ಒಳಗಾಗಿದ್ದ ಕೊಲೆಯಾದ ಸತ್ಯಮ್ಮ ಪತಿ ಅಣ್ಣಪ್ಪ ಎಂಬಾತ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಕುಟುಂಬಸ್ಥರ ಗಂಭೀರ ಆರೋಪಿದ್ದಾರೆ. ಈತ ಕಳೆದ ಅನೇಕ ತಿಂಗಳುಗಳಿಂದ ಪತ್ನಿಯ ಬಳಿ ಗೃಹಲಕ್ಷ್ಮೀ ಹಣ ತಂದು ಕೊಡುವಂತೆ ಪರಿ ಪರಿಯಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಇದೆ ವಿಚಾರಕ್ಕೆ ಸಂಬಂಧಿಸಿ ಅಣ್ಣಪ್ಪನ ವಿರುದ್ಧ ಎರಡು ಬಾರಿ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಬಳಿಕ ರಾಜೀ ಸಂಧಾನ ಮಾಡಲಾಗಿತ್ತು.

ಆದರೂ ಸಹ ಈತ ಕುಡಿಯಲು ಗೃಹಲಕ್ಷ್ಮೀ ಹಣ ಬಿಡಿಸಿಕೊಡುವಂತೆ ಪತ್ನಿಗೆ ಪೀಡಿಸುತ್ತಿದ್ದ‌, ಪ್ರತಿ ತಿಂಗಳು ಗೃಹಲಕ್ಷ್ಮೀ ಹಣ ಬರುವುದನ್ನು ಕಾದು ಪೋನ್ ಪೇ ಗೂಗಲ್ ಪೇ ಮೂಲಕ ತಾನೇ ಬಿಡಿಸಿಕೊಂಡು ಕುಡಿಯುತ್ತಿದ್ದ.ಪತಿಯ ಕಾಟದಿಂದ ಬ್ಯಾಂಕ್‌ನಲ್ಲಿ ನಂಬರ್ ಚೇಂಜ್ ಮಾಡಿಕೊಂಡಿದ್ದಳು.ಇದರಿಂದ ಸಿಟ್ಟಾದ ಪತಿ ನಿತ್ಯವೂ ಪತ್ನಿಯೊಂದಿಗೆ ಜಗಳ‌ ಮಾಡುತ್ತಿದ್ದ

ಸತ್ಯಮ್ಮ ನಿನ್ನೆ ಆಸಗೋಡು ಬ್ಯಾಂಕ್ ನಲ್ಲಿ ಗೃಹ ಲಕ್ಷ್ಮಿ ಹಣ ಬಿಡಿಸಲು ಹೋಗಿದ್ದ ವೇಳೆ ಹಣಕ್ಕಾಗಿ ಪೀಡಿಸಿ ಹಣ ಕೊಡದೆ ಇರುವುದಕ್ಕೆ ಬ್ಯಾಂಕ್ ನಲ್ಲೇ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.ಬಳಿಕ ಪ್ರಕರಣ ಮುಚ್ಚಿಹಾಕಲು ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದ, ನಂತರ ಆತನ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದಾನೆ.ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಗಮನಿಸಿ