ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು : ಗೋವಾ ರಾಜ್ಯದ ಮಾದರಿಯಲ್ಲಿ ಕರ್ನಾಟಕದ ಕರಾವಳಿ ಬೀಚ್‌ಗಳನ್ನ ಅಭಿವೃದ್ಧಿ ಪಡಿಸಲು ಬೀಚ್‌ಗಳಲ್ಲಿ ಟೆಂಟ್ ಹಾಗೂ ಮದ್ಯ ಮಾರಾಟ,ಮದ್ಯಪಾನಕ್ಕೆ ಅನುಮತಿ ನೀಡಬೇಕು ಎನ್ನುವ ಪ್ರಸ್ರಾವನೆಯನ್ನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಮಂಗಳೂರಿನಲ್ಲಿ ಆಯೋಜನೆ ಮಾಡಲಾಗಿದ್ದ ಕನೆಕ್ಟ್ 2024ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ, ಕರ್ನಾಟಕದ ಕರಾವಳಿ ಬೀಚ್‌ಗಳತ್ತ ಪ್ರವಾಸಿಗರನ್ನ ಸೆಳೆಯುವ ಉದ್ದೇಶದಲ್ಲಿ ಗೋವಾ ಮಾದರಿಯಲ್ಲಿ ಟೆಂಟ್ ಹಾಗೂ ರಾಜ್ಯದಲ್ಲಿರುವ ಮದ್ಯ ಬಳಕೆ ಮೇಲೆ ಈಗ ಇರುವ ನಿರ್ಬಂದಗಳನ್ನ ಸಡಿಸಬೇಕಾದ ಅನಿರ್ವಾಯತೆ ಇದೆ. ಬೀಚ್‌ಗಳಿಗೆ ಬರುವ ಪ್ರವಾಸಿಗರಿಗೆ ಯಾವುದೆ ರೀತಿಯ ಸಮಸ್ಯೆ ಆಗದಂತೆ ಕಡಲತೀರದಲ್ಲಿ ಇನ್ನೂ ಹೆಚ್ಚಿನ ಬೆಳಕಿನ ವ್ಯವಸ್ಥೆ ಜೊತೆಗೆ ಸಿಬ್ಬಂದಿಗಳನ್ನ ನಿಯೋಜನೆಗೆ ಚಿಂತನೆ ನಡೆಸಲಾಗುತ್ತಿದೆ. ಅದರೊಂದಿಗೆ ಕಡಲತೀರದ ಸಮೀಪದಲ್ಲಿ ಸರಕಾರಿ ಹಾಗೂ ಖಾಸಗಿ ಜಮೀನುಗಳನ್ನ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.ರಾಜ್ಯದಲ್ಲಿ ಸಹ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದಿದ್ದಾರೆ
ದಕ್ಷಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ ತಡರಾತ್ರಿ ತನಕ ಪ್ರವಾಸಿಗರಿಗೆ ಬೀಚ್‌ಗಳಿಗೆ ಬೇಟಿ ನೀಡಲು ಅವಕಾಶ ನೀಡುವಂತೆ ಮನವಿ ಮಾಡಿದ ಡಿಸಿ ಮಂಗಳೂರು ನಗರಗಳಲ್ಲಿರುವ ರೆಸ್ಟೋರೆಂಟ್‌ಗಳು ಹಾಗೂ ಅನುಮತಿ ಪಡೆದ ವ್ಯಾಪಾರ ಸಂಸ್ಥೆಗಳ ವ್ಯವಹಾರದ ಸಮಯವನ್ನ ರಾತ್ರಿ ಒಂದು ಗಂಟೆ ತನಕ ವಿಸ್ತರಿಸಲಾಗಿದೆ. ಹೀಗಾಗಿ ನಗರ ಸಮೀಪದ ಬೀಚ್‌ಗಳಿಗೆ ಬರುವ ಪ್ರವಾಸಿಗರಿಗೆ ತಡರಾತ್ರಿ ತನಕ ಇರಲು ಅವಕಾಶ ಕಲ್ಪಿಸಬೇಕಿದೆ ಎಂದರು. ಹೊಸ ಪ್ರವಾಸೋದ್ಯಮ ನೀತಿ ಕರಾವಳಿ ಪ್ರವಾಸೋದ್ಯಮಕ್ಕೆ ಪ್ರತ್ಯೇಕವಾಗಿರುವ ಮಾರ್ಗಸೂಚನೆ ಹೊಂದಲಿದೆ ಎಂದು ತಿಳಿಸಿದ್ದಾರೆ.
ಕರಾವಳಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಸಸಿಹಿತ್ಲು, ಬಟಪಾಡಿ ಬೀಚ್‌ವರೆಗಿನ ಪ್ರದೇಶವನ್ನು ಪ್ರವಾಸೋದ್ಯಮದ ಅಭಿವೃದ್ದಿಗಾಗಿ ನಕ್ಷೆ ಸಿದ್ದಪಡಿಸುಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ ನಿರ್ದೇಶನ ನೀಡಿದರು.
ಗಮನಿಸಿ