ಸುದ್ದಿಬಿಂದು ಬ್ಯೂರೋ
ಕಾರವಾರ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಗೆ ಬಂದ ಸಂದರ್ಭದಲ್ಲಿ ಹಿರಿಯ ರಾಜಕಾರಣಿ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯ ಆರ್ ವಿ ದೇಶಪಾಂಡೆ ಸಿದ್ದರಾಮಯ್ಯ ಅವರು ಬೆಂಬಲಿಸಿದರೆ ನಾನು ಸಿ ಎಂ ಆಗೋದಕ್ಕೆ ಸಿದ್ದ ಎಂದಿದ್ದರು. ಬಳಿಕ ವರಸೆ ಬದಲಿಸಿದ ದೇಶಪಾಂಡೆ ನಾನು ಸಿಎಂ ರೇಸ್‌ನಲ್ಲಿ ಇಲ್ಲ ಎಂದು ಸುಮ್ಮನಾಗಿದ್ದರು.ಮೂಲಗಳ ಪ್ರಕಾರ ತೆರೆಮರೆಯಲ್ಲಿ ಕಸರತ್ತು ಮುಂದುವರೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಗೌಪ್ಯವಾಗಿ ಕೆಲ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ದೇಶಪಾಂಡೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ನಿನ್ನೆ ಹೊನ್ನಾವರದಲ್ಲಿ‌ ನಡೆದ ಜಿಲ್ಲಾಮಟ್ಟದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆರ್ ವಿ ದೇಶಪಾಂಡೆ ಆಗಮಿಸಿದ್ದರು.ಆದರೆ ಮೂಡಗಣಪತಿ ದೇವಸ್ಥಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ.ನೇರವಾಗಿ ಅವರು ಕಾರವಾರಕ್ಕೆ ಆಗಮಿಸಿದ್ದಾರೆ. ನಂತರ ಶಾಸಕ ಸತೀಶ ಸೈಲ್ ಅವರ ಮನೆಗೆ ಭೇಟಿ ನೀಡಿದ ದೇಶಪಾಂಡೆ ಅವರು ಕೆಲ ನಿಮಿಷಗಳ ಕಾಲ ಮಾತ್ರ ಪಕ್ಷದ‌ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಿದ್ದಾರಂತೆ.

ನಂತರ ಶಾಸಕ ಸತೀಶ ಸೈಲ್ ಅವರ ಮನೆಯಲ್ಲಿದ್ದ ಎಲ್ಲಾ ಮುಖಂಡರು ಹಾಗೂ ಕಾರ್ಯಕರನ್ನ ಹೊರಗಿಟ್ಟು ಇಬ್ಬರೆ ಸುಮಾರು ಅರ್ಧಗಂಟೆಗಳ ಕಾಲ‌ ಸುಧೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.ಒಂದು ಕಡೆ ರಾಜ್ಯದಲ್ಲಿ ಸಿ ಎಂ ಸಿದ್ದರಾಮಯ್ಯ ಅವರನ್ನ ಬದಲಾವಣೆ ಮಾಡುವ ಕುರಿತು ಚರ್ಚೆಗಳು ಮುಂದುವರೆದಿರುವ ಕಾರಣಕ್ಕೆ ದೇಶಪಾಂಡೆ ಅವರು ತಮ್ಮ ಆಪ್ತರನ್ನ ಗೌಪ್ಯವಾಗಿ ಭೇಟಿಯಾಗಿ ಒಂದೊಮ್ಮೆ ಸಿದ್ದರಾಮಯ್ಯ ಅವರನ್ನ ಕೇಳಗಿಳಿಸಿದ್ದಲ್ಲಿ ನಿಮ್ಮೆಲ್ಲರ ಬೆಂಬಲ ತನ್ನಗೆ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆಯೇ ಎನ್ನುವ ಗುಸುಗುಸು ಕೇಳಿ ಬರುತ್ತಿದೆ.ಶಾಸಕ ಸೈಲ್ ಅವರು ಸಿ ಎಂ ಅವರ ಆಪ್ತರಾಗಿದ್ದರಿಂದ ಅಷ್ಟೊಂದು ಸುಲಭವಾಗಿ ಸಿ ಎಂ ಪಾಳಯದಿಂದ ಜಿಗಿದು ಹೊರ ಬರುವುದ ಸುಲಭದ ಮಾತಲ್ಲ.

ಆದರೆ ಅದೇನೆ ಇದ್ದರೂ ಸದ್ಯ ಇನ್ ಡೋರ್‌ನಲ್ಲಿ ನಡೆದ ಆ ಚರ್ಚೆಗಳು ಈ ಕ್ಷಣಕ್ಕೆ ಹೊರ ಬರದೆ ಇದ್ದರೂ ಸಹ ರಾಜಕೀಯ ವಿಶ್ಲೇಷಕರ ಹೇಳೋ ಪ್ರಕಾರ ಶಾಸಕ ಸತೀಶ ಸೈಲ್ ಮನೆಯೊಳಗೆ ಆರ್ ವಿ ದೇಶಪಾಂಡೆ ನಡೆಸಿದ ಸಭೆಯ ಬಗ್ಗೆ ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡತ್ತಿರೋದು ಮಾತ್ರ ಸತ್ಯ.

ಗಮನಿಸಿ