ಸುದ್ದಿಬಿಂದು ಬ್ಯೂರೋ
ಹುಬ್ಬಳ್ಳಿ : ಪತ್ನಿಯ ಸಹೋದರಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಬೆಂಗಳೂರಿನಿಂದ ಹುಬ್ಬಳಿಗೆ ಬಂದು ಆಟೋ ಚಾಲಕನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ‌ ಘಟನೆ ಹುಬ್ಬಳ್ಳಿ ನಗರದ ಮೊರಾರ್ಜಿ ನಗರದಲ್ಲಿ ನಡೆದಿದೆ.

ಬೆಂಗಳೂರು ಮೂಲದ ಲೋಕೇಶ ಹಾಗೂ ಆತನ ಪತ್ನಿಯ ಸಹೋದರಿ‌ ಜೊತೆ ಲೋಕೇಶ ಅನೈತಿಕ ಸಂಬಂಧ ಹೊಂದಿದ್ದ. ಹೀಗಾಗಿ ಆತ ಬೆಂಗಳೂರಿನಿಂದ ಆಕೆಯನ್ನ ಕರೆದುಕೊಂಡು ಹುಬ್ಬಳ್ಳಿಗೆ ಓಡಿ ಬಂದಿದ್ದ.

ಹುಬ್ಬಳ್ಳಿಗೆ ಬಂದ ಲೋಕೇಶ್ ಆಟೋ ಬಾಡಿಗೆ ಪಡೆದು ನಗರದ ವಿವಿಧ ಬಡಾವಣೆಯಲ್ಲಿ ಸಂಚಾರ ಮಾಡಿ, ಆಟೋ ಚಾಲಕನಿಂದ ಊಟ ತರೆಸಿಕೊಂಡಿದ್ದ. ಆಟೋ ಚಾಲಕ ಆ ಜೋಡಿಗೆ ತನ್ನ ಮನೆಯಲ್ಲಿಯೇ ಊಟ ಕೊಡಿಸಿ ನಾನು ಬಾಡಿಗೆ ಹೋಗಿ ಬರುವ ತನಕ ಊಟ ಮಾಡಿಕೊಂಡು ಇಲ್ಲೆ ಉಳಿದುಕೊಳ್ಳಿ ಎಂದು ಬೇರೆ ಒಂದು ಬಾಡಿಗೆ ತೆಗೆದುಕೊಂಡು ಹೋಗಿದ್ದ.

ಆಟೋ ಚಾಲಕ ಬಾಡಿಗೆ ಬಿಟ್ಟು ವಾಪಸ್ ಮನೆಗೆ ಬರುವಷ್ಟರಲ್ಲಿ ಆ ಇಬ್ಬರು ಇದೇ ಆಟೋ ಚಾಲಕನ ಮನೆಯಲ್ಲಿ ಒಂದೇ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನೂ ಆತ್ಮಹತ್ಯೆ ಮಾಡಿಕೊಂಡ ಶಾಂತಿ ಮೂರು ಮದುವೆಯಾಗಿದ್ದು, ತನ್ನ ಅಕ್ಕನ‌ ಗಂಡ ಜೊತೆಗೆ ಅನೈತಿಕ ಸಂಬಂದ ಇಟ್ಟುಕೊಂಡಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ‌.