ಸುದ್ದಿಬಿಂದು ಬ್ಯೂರೋ
ಕುಮಟ : ಹೆದ್ದಾರಿ ಬದಿಯಲ್ಲಿ ವಾಹನಕ್ಕಾಗಿ ಕಾಯುತ್ತಿದ್ದ ವ್ಯಕ್ತಿ ಓರ್ವನಿಗೆ ಕಂಟೇನರ್ ವಾಹನ ಡಿಕ್ಕಿ ಹೊಡೆದು (Road accident)ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ(Uttarkannada) ಕುಮಟ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಿರ್ಜಾನ‌ ಕೋಟೆ (Mirjana Kote Road
) ಕ್ರಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ದೇವು ಆಗೇರ (70) ಮೃತ ವ್ಯಕ್ತಿಯಾಗಿದ್ದಾರೆ.ಇವರು ಮಿರ್ಜಾನ ಕೋಟೆ ಕ್ರಾಸ್ ಬಳಿ ವಾಹನಕ್ಕಾಗಿ ಕಾಯುತ್ತಿದ್ದು, ಈ ವೇಳೆ ಕುಮಟ ಕಡೆಯಿಂದ ಅಂಕೋಲಾ‌ ಕಡೆ ಹೋಗುತ್ತಿದ್ದ ಕಂಟೇನರ್ ವಾಹನ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೆದ್ದಾರಿ ಬಂದಿಯಲ್ಲಿ ವಾಹನಕ್ಕೆ ಕಾಯುತ್ತಿದ್ದ ದೇವು ಆಗೇರ ಅವರಿಗೆ ಡಿಕ್ಕಿ ಹೊಡದು ಸ್ಥಳದಲ್ಲಿ ನಿಲ್ಲಿಸದೆ ಚಲಿಸಿಕೊಂಡು ಹೋಗಿದ್ದ, ತಕ್ಷಣ ಸ್ಥಳೀಯರು ಅಪಘಾತಕ್ಕೆ ಕಾರಣವಾದ ವಾಹನವನ್ನ ಬೆನ್ನಟ್ಟಿ ಹಿಡಿದಿದ್ದಾರೆ.