ಸುದ್ದಿಬಿಂದು ಬ್ಯೂರೋ
ಕುಮಟ : ನದಿಯಲ್ಲಿ‌ ಮೀನುಗಾರಿಕೆ ಮಾಡುತ್ತಿದ್ದ ಯುವಕನೋರ್ವ ನದಿಯಲ್ಲಿ ಮುಳುಗಡೆಯಾಗಿ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟ(kumta)ತಾಲೂಕಿನ ಮಿರ್ಜಾನ ತಾರೀಬಾಗಿ‌ನ ಅಘನಾಶಿನಿ (Aghanashini River) ನದಿಯಲ್ಲಿ ನಡೆದಿದೆ.

ಕೃಷ್ಣ ಲಿಂಗಪ್ಪ ಅಂಬಿಗ (24) ಮೃತ ಯುವಕನಾಗಿದ್ದಾನೆ. ಈತ ತಾರೀಬಾಗಿ ಗ್ರಾಮದ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾ‌‌ನೆ. ಆತ ಮುಳುಗಡೆಯಾಗುತ್ತಿರುವುದನ್ನ ಸ್ಥಳೀಯರು ಗಮನಿಸಿದರಾದ್ದರು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ.

ಯುವಕ ನದಿಯಲ್ಲಿ ಮುಳುಗಡೆಯಾದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮುಳುಗಡೆಯಾಗಿ ಮೃತಪಟ್ಟಿದ್ದ ಯುವಕ ಶವ ಮೇಲಕ್ಕೆತ್ತಲ್ಲಾಗಿದೆ. ಈತ ಬೇರೆ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ
ಈತ ನಿನ್ನೆ ರಾತ್ರಿ ಮನೆಗೆ ಬಂದಿದ್ದ ಎನ್ನಲಾಗಿದೆ.

ಇಂದು ಅಮವಾಸ್ಯೆ ಆಗಿರುವ ಕಾರಣ ಆತ ಬೋಟ್ ಗೆ ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದು, ಈ ವೇಳೆ ಮನೆ ಸಮೀಪ ಇದ್ದ ನದಿಯಲ್ಲಿ ಮೀನುಗಾರಿಕೆಗೆ ಹೋಗಿದ್ದು, ಈ ವೇಳೆ ಈ ದುರ್ಘಟನೆ ನಡೆದಿದೆ. ತೀರಾ ಬಡತನದಲ್ಲಿ ಕುಟುಂಬದಲ್ಲಿ ಜನಿಸಿದ್ದು, ಈತನೆ ಮನೆಗೆ ಆಸರೆಯಾಗಿದ್ದ.