ಸುದ್ದಿಬಿಂದು ಬ್ಯೂರೋ
ಶಿರಸಿ: ಹೊಳೆಯಲ್ಲಿ ಈಜಲು ಹೋಗಿದ್ದ, ಇಂಜಿನೀಯರಿಂಗ್ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ಪಾಂಡವರ ಹೊಳೆಯಲ್ಲಿ ನಡೆದಿದೆ.

ಮಂಗಳೂರು ಜಿಲ್ಲೆಯ ಬಂಟ್ವಾಳದ ದಯೋಬೈ ಮಿಡಿಕಾರ್ ಎಂಬಾತನೆ ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿ, ಈತ ಮಂಗಳೂರಿನಿಂದ ಶಿರಸಿಯಲ್ಲಿರುವ ಗೆಳಯನ ಮನೆಗೆ ಬಂದಿದ್ದ.

ಈ ವೇಳೆ ಆತ ಸ್ನೇಹಿತನ ಜೊತೆಗೆ ಪಾಂಡವರ ಹೊಳೆಗೆ ಈಜಲು ಹೋಗಿದ್ದು, ಆ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.