suddibindu.in
ಕುಮಟಾ : ಜೆಡಿಎಸ್(jds)ಮುಖಂಡ ಸೂರಜ್ ನಾಯ್ಕ ಸೋನಿ ಅವರ ರಾಜಕೀಯ ನಡೆ ಇನ್ನೂ ನಿಗೂಢವಗಿದೆ. ಅವರು ಕಾಂಗ್ರೆಸ್ (Congress)ಸೇರ್ಪಡೆ ಆಗತ್ತಾರೋ ಇಲ್ಲ ಜೆಡಿಎಸ್ ನಲ್ಲಿಯೆ ಮುಂದುವರೆಯಲಿದ್ದಾರೋ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ ಎನ್ನಲಾಗಿದೆ.
ಈ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿ(BJP leaders) ನಾಯಕರುಗಳು ಸೂರಜ್ ಸೋನಿ ಅವರನ್ನ ಅಧಿಕೃತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ಈ ಕ್ಷಣದ ತನಕ ಎರಡು ಪಕ್ಷದ ನಾಯಕರು ಸೂರಜ್ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.ಇದಕ್ಕೆ ಪುಷ್ಠಿ ಎನ್ನುವುದಂತೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಸೋನಿ ಉತ್ತರಕನ್ನಡ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದಿದ್ದಾರೆಂದು ಹೇಳಿಕೊಂಡಿದ್ದಾರೆ.
- ಅರ್ಪಿತಾಗೆ ವಿಟಿಯುನಿಂದ ಡಾಕ್ಟರೇಟ್
- ಬಡತನದ ನಡುವೆಯೂ CA ಸಾಧನೆ: ಶಿರಸಿಯ ಹಳ್ಳಿಕಾನಿನ ರಮೇಶ್ ನಾಯ್ಕ್ ಅವರ ಸ್ಪೂರ್ತಿದಾಯಕ ಯಶೋಗಾಥೆ
- ವಾರದ_ಕಥನ…ಕಾಣದ-ಬಿಂಬ ೩, ಸುಬ್ಬಮ್ಮ ಅನಾಥೆಯಲ್ಲ
ತನ್ನ ಕ್ಷೇತ್ರದ ಮತದಾರರನ್ನ ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಸೂರಜ್ ಸೋನಿ ಇನ್ನೇರಡು ದಿನದಲ್ಲಿ ರಾಜಕೀಯಗಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುವ ಜೊತೆಗೆ ಜಿಲ್ಲೆಯ ಮುಖಂಡರು ನಿರಂತರ ಸಂಪರ್ಕದಲ್ಲಿದ್ದಾರೆಂದು ಹೇಳಿದ್ದಾರೆ, ಆದರೆ ಮುಂದೆ ಯಾವ ಪಕ್ಷಕ್ಕೆ ಸೇರುತ್ತೇನೆ ಎನ್ನುವ ಬಗ್ಗೆ ಎಲ್ಲಿಯೂ ಹೇಳಿಲ್ಲ.ಅವರ ಹೇಳಿಯನ್ನ ಗಮನಿಸಿದರೆ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿದರೆ.
ಈ ವಿಚಾರಕ್ಕೆ ಸಂಬಂಧಿಸಿ ಅವರನ್ನ ಸಂಪರ್ಕ ಮಾಡಲಾಗಿದ್ದು, ತಾವು ಕಾಂಗ್ರೆಸ್ ಸೇರಲಿದ್ದೀರಿ ಎನ್ನುವ ಚರ್ಚಗಳು ಆರಂಭವಾಗಿದೆ ಈ ಬಗ್ಗೆ ತಮ್ಮ ನಿಲುವೆನು ಎನ್ನುವ ಬಗ್ಗೆ ಕೇಳಿದಕ್ಕೆ ನಾನು ಇನ್ನೂ ಜೆಡಿಎಸ್ನಲ್ಲೆ ಇದ್ದೇನೆ. ಸದ್ಯ ಯಾವ ಪಕ್ಷಕ್ಕೂ ಸೇರಬಕು ಎನ್ನುವ ಬಗ್ಗೆ ತೀರ್ಮಾನ ಮಾಡಿಲ್ಲ..ಆದರೆ ಒಂದಂತ್ತು ಸತ್ಯ. ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಪಕ್ಷಕ್ಕೆ ಸೇರ್ಪಡೆ ಆಗುವಂತೆ ಒತ್ತಾಯ ಮಾಡತ್ತಿದ್ದಾರೆ. ಆದರೆ ನಾನು ಈ ಕ್ಷಣದವರಗೆ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವ ತೀರ್ಮಾನ ಮಾಡಿಲ್ಲ ಎಂದಿದ್ದಾರೆ.