ಸುದ್ದಿಬಿಂದು ಬ್ಯೂರೋ
ಧಾರವಾಡ: ರಸ್ತೆ ಬದಿ ನಿಂತಿದ್ದ ಬಾಲಕನಿಗೆ ರಾಜ್ಯಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ (Bus Accident) ಹೊಡೆದಿದೆ. ಪರಿಣಾಮ ಬಾಲಕ ಮೃತಪಟ್ಟ ಘಟನೆ ಧಾರವಾಡ-ಹಳಿಯಾಳ ರಸ್ತೆಯಲ್ಲಿನ (Dharwad-Haliala Road) ತಾಲೂಕಿನ ಸಲಕಿನಕೊಪ್ಪದ ಬಳಿ ಸಂಭವಿಸಿದೆ.
.

ಮುಧೋಳ ಮೂಲದ ಅರ್ಷದ ಅಹ್ಮದ ಸಲೀಂ ಚೌಧರಿ (8)ಮೃತಪಟ್ಟಿದ್ದು, ದಾಂಡೇಲಿಗೆ ( Dandeli) ತೆರಳುತ್ತಿದ್ದ ಸಮಯದಲ್ಲಿ ಧಾರವಾಡ ತಾಲೂಕಿನ ಸಲಕಿನಕೊಪ್ಪದ ಬಳಿ ಉಪಹಾರಕ್ಕಾಗಿ ಹೊಟೇಲ್ ಬಳಿ ಕಾರು ನಿಲ್ಲಿಸಿದ್ದರು.

ಉಪಹಾರ ಮುಗಿಸಿ ಬಾಲಕ ಕಾರು ಬಳಿ ನಿಂತ ಸಮಯದಲ್ಲಿ, ದಾಂಡೇಲಿಯಿಂದ ಸೊಲ್ಲಾಪುರಕ್ಕೆ (Solapur) ತೆರಳುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಕೊನೆಯುಸಿರೆಳೆದಿದ್ದಾನೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಬಸನಗೌಡ ಮೆಳೆಪ್ಪನವರ ಭೇಟಿ ನೀಡಿ, ಪರಿಶೀಲನೆ ನಡೆಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿದರು. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ