ಬಾಗಲಕೋಟೆ: ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ವಿಚಾರಣೆಗೆ ಒಳಪಡುತ್ತಿರುವ ಚೈತ್ರಾ ಕುಂದಾಪುರ ಅವರ ಮಾಲೀಕತ್ವದ ಕೀಯಾ ಕಾರು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಪತ್ತೆಯಾಗಿದೆ.

ಮುಧೋಳ ಪಟ್ಟಣದ ಕಿರಣ ಎಂಬುವವರ ತೋಟದಲ್ಲಿದ್ದ ಕಾರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರನ್ನ ಇದೇ ವರ್ಷದ ಮಾರ್ಚನಲ್ಲಿ ಖರೀದಿ ಮಾಡಲಾಗಿದೆ. ಸೊಲ್ಲಾಪುರದಲ್ಲಿದ್ದ ಕಾರನ್ನ ತನ್ನ ಬಳಿ ತೆಗೆದುಕೊಂಡು ಹೋಗುವಂತೆ ಮುಧೋಳನಲ್ಲಿ ಡ್ರೈವಿಂಗ್ ಶಾಲೆ ನಡೆಸುತ್ತಿರುವ ಕಿರಣ ಎಂಬಾತನಿಗೆ ಚೈತ್ರಾ ಹೇಳಿದ್ದರಂತೆ.

ಚೈತ್ರಾ ಕುಂದಾಪುರ ಅವರ ಜೊತೆ ಮೊದಲಿಂದಲೂ ಸಂಪರ್ಕ ಹೊಂದಿದ್ದ ಕಿರಣ, ಕಾರನ್ನ ತನ್ನೂರಿಗೆ ತೆಗೆದುಕೊಂಡು ಬಂದಿದ್ದ. ಈ ವಿಷಯವೀಗ ಸಿಸಿಬಿ ಗೊತ್ತಾಗಿ, ಕಾರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.