ಸುದ್ದಿಬಿಂದು ಬ್ಯೂರೋ
ಅಂಕೋಲಾ
: ಮೀನುಗಾರಿಕೆಗೆ ತೆರಳಿ್ ಬೋಟ್ ಒಂದು ಭಾರೀ ಪ್ರಮಾಣದ ಗಾಳಿಗೆ ಸಿಲುಕಿ ಬೋಟ್ ಮುಳುಗಡೆ ಆಗಿ 12ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಂಬಾರದ ಅರಬ್ಬೀ ಸಮುದ್ರದಲ್ಲಿ ನಡೆದಿದೆ

ಚಂದ್ರಾವತಿ ಸುಭಾಷ್ ಖಾರ್ವಿ ಎಂಬುವವರಿಗೆ ಸೇರಿದ ಪರ್ಷಿಯನ್ ಬೋಟ್ ಇದಾಗಿದ್ದು, ಸಮುದ್ರದಲ್ಲಿ ಮೀನುಗಾರಿಕೆಗೆ ಹೋದಾಗ ಅಲೆಯ ಅಬ್ಬರಕ್ಕೆ ವೇಗವಾಗಿ ನೀರು ನುಗ್ಗಿದ ಪರಿಣಾಮ ಬೋಟ್ ಮುಳುಗಡೆಯಾಗಿದೆ.

ಇನ್ನೂ ಈ ಬೋಟ್ ನಲ್ಲಿದ್ದ 12ಮಂದಿ ಮೀನುಗಾರರ ಅಲ್ಲೆ ಸಮೀಪದಲ್ಲಿದ್ದ ಜೈ ಶ್ರೀರಾಮ ಹೆಸರಿನ ಬೋಟ್ ನಿಂದ ಎಲ್ಲಾ 12ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಘಟನೆಯಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.