ಸುದ್ದಿಬಿಂದು ಬ್ಯೂರೋ
ಅಂಕೋಲಾ: ಭಾತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಬಂದಿರುವ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಜು ಗೌಡ ಅವರಿಗೆ ಹಾರವಾಡ ಗ್ರಾಮ ಪಂಚಾಯತ ಸದಸ್ಯನಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ರಾಜು ಗೌಡ ಅವರು ಭಾರತೀಯ ಸೈನ್ಯದಲ್ಲಿ 16ವರ್ಷ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿ ತವರಿಗೆ ಮರಳಿದ್ದಾರೆ.ಅವರು 15ದಿನ ಹಿಂದಷ್ಟೇ ನಿವೃತ್ತರಾಗಿದ್ದು, ತಮ್ಮ ಊರಾಗಿರುವ ಹಾರವಾಡಕ್ಕೆ ಮರಳಿದ್ದಾರೆ.ಈ ಸಂದರ್ಭದಲ್ಲಿ ಹಾರವಾಡ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಸುಭಾಷ ನಾಯ್ಕ ಅವರು ಸನ್ಮಾನಿಸಿದ್ದಾರೆ.

ಈ ವೇಳೆ ಮಾತನಾಡದ ಅವರು, ಹಾರವಾಡದ ಬಡ ಕುಟುಂಬದಲ್ಲಿ ಹುಟ್ಟಿ, ದೇಶ ಸೇವೆ ಮಾಡಿ ನಿವೃತ್ತಿ ಹೊಂದಿದ ರಾಜು ಗೌಡ ಅವರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಇದ್ದರು.