suddibindu.in
ಕಾರವಾರ:
ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದ ಜನರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ,. ಪೆಟ್ರೋಲ್‌ಗೆ 3, ಡೀಸೆಲ್‌ಗೆ 3.5 ಏರಿಕೆ ಮಾಡಲಾಗಿದೆ. ಈ ತಕ್ಷಣದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

ಪೆಟ್ರೋಲ್‌ ಮೇಲಿನ ವ್ಯಾಟ್‌ಅನ್ನು ಶೇ.25.92ರಿಂದ ಶೇ.29.84ಕ್ಕೆ ಹೆಚ್ಚಿಸಲಾಗಿದೆ. ಇನ್ನೂ ಡೀಸೆಲ್‌ ಮೇಲಿನ ವ್ಯಾಟ್‌ಅನ್ನು ಶೇ.14.34ರಿಂದ ಶೇ.18.44ಕ್ಕೆ ಏರಿಕೆ ಮಾಡಲಾಗಿದೆ. ತೆರಿಗೆ ಹೆಚ್ಚಳ ಹಿನ್ನೆಲೆ, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ₹3 ಹಾಗೂ ಡೀಸೆಲ್ ಬೆಲೆ ₹3.50 ಹೆಚ್ಚಳ‌ವಾಗಿದೆ.