ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಉತ್ತರಕನ್ನಡ ಜಿಲ್ಲೆಯಿಂದ ಮಂಗಳೂರಿನ ಕರಾವಳಿ ಜಿಲ್ಲೆಯವರೆಗೆ ಮಾದಕ ವಸ್ತು ಪೊರೈಕೆ ಮಾಡುವ ಡ್ರಗ್ಸ್ ಜಾಲದ ಕಿಂಗ್ ಪಿನ್ ಎನ್ನಲಾದ ನೈಜೀರಿಯಾ(nigeria)ಮೂಲದ ಲೇಡಿ ಓರ್ವಳನ್ನ ಸಿಸಿಬಿ ಪೊಲೀಸರು(CCB Police)ಬಂಧಿಸಿದ್ದಾರೆ.

ಬೆಂಗಳೂರಿನ ಯಲಹಂಕ ಜಕ್ಕೂರಿನ ಚೊಕ್ಕನಹಳ್ಳಿ ಅಪಾರ್ಟೆಂಟ್‌ನಲ್ಲಿ ವಾಸವಾಗಿದ್ದ, ನೈಜೀರಿಯಾ ಮೂಲದ ಅಡೆವೊಲೆ ಅಡೆಟುಟು ಆನು ಆಲಿಯಾಸ್ ರೆಜನಾ ಜರಾ ಆಲಿಯಾಸ್ ಆಯಿಶಾ(33) ಬಂಧಿತ ಮಹಿಳೆಯಾಗಿದ್ದಾಳೆ.

ಈಕೆ ಬೆಂಗಳೂರಿನಲ್ಲಿ ಇದ್ದುಕೊಂಡೆ ಕರಾವಳಿ ಜಿಲ್ಲೆಗಳಿಗೆ ಮಾದಕ ವಸ್ತುಗಳನ್ನ (Drugs)ಪೂರೈಕೆ ಮಾಡುತ್ತಿದ್ದಳು ಎನ್ನಲಾಗಿದೆ.ಇತ್ತೀಚೆಗೆ ಕರಾವಳಿ ಜಿಲ್ಲೆಯಲ್ಲಿ ಮಾದಕ ವಸ್ತು ಸೇವನೆ ಮಾಡುವರ ಸಂಖ್ಯೆ ಹೆಚ್ಚಾಗುವುದರ‌ ಜೊತೆಗೆ ಮಾರಾಟ ಮಾಡುವವರ ಸಂಖ್ಯೆ ಸಹ ಹೆಚ್ಚಾಗಿತ್ತು ಎನ್ನಲಾಗಿದೆ. ಈಗಾಗಲೇ ಮಹಿಳೆಯನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದು, ಮತ್ತಷ್ಟು ‌ಆರೋಪಿಗಳನ್ನ ಬಂಧಿಸುವ ಸಾಧ್ಯತೆ ಇದೆ.