ಸುದ್ದಿಬಿಂದು ಬ್ಯೂರೋ
ಕಾರವಾರ : ಹಿಂದೂಗಳನ್ನ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಕೇಳಿ ಬಂದ‌ ಆರೋಪದ‌ ಮೇಲೆ ಸ್ಥಳೀಯ ಹಿಂದೂಗಳು ಪ್ರಾರ್ಥನೆ ನಡೆಯುತ್ತಿದ್ದ‌ ಸ್ಥಳಕ್ಕೆ ಮುತ್ತಿಗೆ ಹಾಕಿ ಗಲಾಟೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ಚಿತ್ತಾಕುಲದ‌ ಕ್ರಿಶ್ ಹಾಲ್‌ನಲ್ಲಿ ನಡೆದೆ.

ಚಿತ್ತಾಕುಲದ‌ ಕ್ರಿಶ್ ಹಾಲ್‌ನಲ್ಲಿ ಅದೆ‌ ಗ್ರಾಮದ ಶ್ಯಾಮ್ ನಾಯಕ ಎಂಬುವವರು ಪ್ರಾರ್ಥನೆಯೊಂದನ್ನ ಆಯೋಜನೆ ಮಾಡಿ ಹಿಂದೂಗಳನ್ನ ಕ್ರಿಶ್ಚಿಯನ್ ಧರ್ಮಕ್ಕೆ‌ ಮತಾಂತರ ‌ಮಾಡಲಾಗುತ್ತಿದೆ ಎನ್ನುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಸ್ಥಳಿಯ ಹಿಂದೂಗಳು ಕ್ರಿಶ್ ಹಾಲ್‌ನಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ಸ್ಥಳಕ್ಕೆ ಮುತ್ತಿಗೆ ಹಾಕಿ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಾರ್ಥನ ಆಯೋಜನೆ ಮಾಡಿದ್ದ ಶ್ಯಾನ್ ನಾಯಕ ಎಂಬಾತ ಈ ಹಿಂದೆ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು ಎನ್ನಲಾಗಿದೆ.

ಪ್ರಾರ್ಥನೆಯಲ್ಲಿ ಬಹುತೇಕ ಹಿಂದೂಗಳೇ ಸೇರಿದ್ದರಿಂದ ಸ್ಥಳೀಯರಿಂದ ಮತಾಂತರದ ಆರೋಪ ಕೇಳಿಬಂದಿದ್ದು, ಇನ್ನೂ ಈ ವಿಚಾರಕ್ಕೆ ಗಲಾಟೆ ನಡೆಯುತ್ತಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದ ಚಿತ್ತಾಕುಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದು, ಈ ಕುರಿತಾಗಿ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.