ಸುದ್ದಿಬಿಂದು ಬ್ಯೂರೋ
ಕಾರವಾರ : ಕೊಂಕಣ ರೈಲ್ವೆ ಮಾರ್ಗದಲ್ಲಿ ನಿತ್ಯವೂ ಹತ್ತಾರು ರೈಲ್ವೆ ಸಂಚಾರ ಮಾಡುತ್ತಿದ್ದು, ರಾಜ್ಯ ಅಷ್ಟೆ ಅಲ್ಲದೆ ದೇಶ-ವಿದೇಶದ‌ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇತ್ತಿಚಿನ ದಿನದಲ್ಲಿ ಈ ಮಾರ್ಗದಲ್ಲಿ‌ ಸಂಚರಿಸುವ ರೈಲ್ವೆಯಲ್ಲಿ “ಗಾಂಜಾ ಘಾಟು” ಜೋರಾಗಿ ಬರುತ್ತಿದೆ ಎನ್ನುವ ಮಾತು ರೈಲ್ವೆ ಪ್ರಯಾಣಿಕರಿಂದ ಕೇಳಿ‌ ಬರುತ್ತಿದೆ.

ಕೊಂಕಣ‌ ರೈಲ್ವೆ ‌ಮಾರ್ಗದಲ್ಲಿ ಸಂಚರಿಸುವ ರೈಲ್ವೆಯಲ್ಲಿ ಪ್ರಯಾಣಿಸುವ ಅನೇಕ‌ ಯುವಕರು ಸಿಗರೇಟ್, ಬಿಡಿ, ಸೇವನೆ ಮಾಡತ್ತಾರೆ ಎನ್ನುವ ಆರೋಪ ಇದೆ. ಇನ್ನೂ ರೈಲ್ಬೆ ಪೊಲೀಸರು ತಪಾಸಣೆಗೆ ಬಂದಾಗಲ್ಲೆಲ್ಲಾ, ರೈಲ್ವೆಯಲ್ಲಿರುವ ಟಾಯ್ಲೆಟ್ ರೂಂ ಸೇರಿಕೊಂಡು ಗಾಂಜಾ ನಶೆ ಏರಿಸಿಕೊಳ್ಳುವವರು ಒಂದಿಷ್ಟು ಮಂದಿ ಇದ್ದರೆ‌. ಇನ್ನೂ ಒಂದಿಷ್ಟು ಜನ ಅವರು ನಮ್ಮ ರಾಜ್ಯದ ಪೊಲೀಸರು, ನಮ್ಮ ಜಿಲ್ಲೆ ಪೊಲೀಸರು ಅವರೆಲ್ಲ ನಮ್ಮ ಪರಿಚಯದವರು ಎಂದು ಹೇಳುತ್ತಾರಂತೆ.‌

ಇನ್ನೂ ಕೆಲ ಪ್ರಯಾಣಿಕರು ದೊಡ್ಡ ದೊಡ್ಡ ಬ್ಯಾಗ್ ಹೊತ್ತಿಕೊಂಡು ಕಂಡ ಕಂಡಲ್ಲಿ ಇಳಿತ್ತಾರೆ ಎನ್ನಲಾಗಿದ್ದು, ಇನ್ನೂ ಮುಂದುವರೆದ ಗಾಂಜಾ ಮಾರಾಟಗಾರರು, ರೈಲ್ವೆ ಸಂಚರಿಸುತ್ತಿರುವಾಗಲೆ ಒಂದಿಷ್ಟು ಸ್ಥಳಲ್ಲಿ ತಮ್ಮ ಬಳಿ ಇದ್ದ ತುಂಬಿದ ಬ್ಯಾಗನ್ನೆ ರೈಲ್ವೆಯಿಂದಲ್ಲೆ ಬಿಸಾಕಿ ಮುಂದೆ ಪ್ರಯಾಣ ಮಾಡುತ್ತಾರೆ ಎನ್ನುವ ಮಾತು ಸಹ ಇದೆ. ರೈಲ್ವೆಯಲ್ಲಿ ಪ್ರಯಾಣಿಸುವ ಸಮಯದಲ್ಲಿ ಸಭ್ಯಪ್ರಯಾಣಿಕರು ಗಾಂಜಾ ಘಾಟು ಬಂದಾಕ್ಷಣ ಬಿಡಿ, ಸಿಗರೆಟ್ ಮೂಲಕ ಗಾಂಜಾ ಸೇವನೆ ಮಾಡುತ್ತಿರುವವರಿಗೆ ಪಕ್ಕದಲ್ಲಿ ಹೋಗಿ ಸೇವನೆ ಮಾಡಿ ಅಂತಾ ಹೇಳಿದ್ದರೆ. ನೀವೆ ಬೇಕಾದಲ್ಲಿ ಪಕ್ಕಕ್ಕೆ ಹೋಗಿ ಅಂತಾ ದರ್ಪದಿಂದಲ್ಲೆ ಮಾತ್ನಾಡುತ್ತಾರೆ ಎನ್ನುವ ಆರೋಪ ಸಹ ಇದೆ.

ಕೆಲವೊಂದು ಘಟನೆಗಳು ಆದಾಗ ಮಾತ್ರ ದಾಳಿ ನಡೆಸಿ ಒಂದಿಷ್ಟು ಪ್ರಕರಣ ದಾಖಲಿಸಿ, ನಂತರದಲ್ಲಿ ಸುಮ್ಮನಾಗುವ ಕಾರ್ಯಚರಣೆಗಳು ಸಹ ನಡೆಯುತ್ತದೆ ಎನ್ನುವ ಬಗ್ಗೆ ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. ಅದು ಏನೆ ಇದ್ದರೂ ಗಾಂಜಾ ನಶೆಗೆ ಒಳಗಾಗಿ ಯುವಕರು ತಮ್ಮ ಜೀವನ ಹಾಳು ಮಾಡಿಕೊಳ್ಳುವ ಮೊದಲು ಇದಕ್ಕೆ ಕಡಿವಾಣ ಹಾಕಬೇಕಿದೆ.