ಸುದ್ದಿಬಿಂದು ಬ್ಯೂರೋ
ಕಾರವಾರ: ರಾಜ್ಯಮಟ್ಟದ ಉತ್ತಮ ಶಿಕ್ಷಕ‌‌ ಪ್ರಶಸ್ತಿ(Best Teacher Award
) ಪ್ರಕಟವಾಗಿದ್ದು,‌ಇದರಲ್ಲಿ ಉತ್ತರಕನ್ನಡ ಜಿಲ್ಲೆಯ ಇಬ್ಬರೂ ಪ್ರಾಥಮಿಕ ಶಾಲೆ‌ ಹಾಗೂ ಓರ್ವ ಪ್ರೌಢಶಾಲಾ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಹೊನ್ನಾವರ ತಾಲೂಕಿನ ಚಿತ್ತಾರ ಸರಕಾರಿ ಪ್ರೌಢಶಾಲೆಯ ಆಗ್ಲ ಶಿಕ್ಷಕರಾಗಿರುವ, ಕುಮಟ ತಾಲೂಕಿನ ಅಳ್ವೆದಂಡೆಯ ಪ್ರಕಾಶ ನಾಯ್ಕ ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಇನ್ನೂ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಹೊನ್ನಾವರ ತಾಲೂಕಿನ ಬೀರಂಕಿ ಪ್ರಾಥಮಿಕ ಶಾಲಾ‌ ಶಿಕ್ಷಕ‌ ಮಂಜುನಾಥ ಹರಿಕಾಂತ ಹಾಗೂ, ಶಿರಸಿ ಶೈಕ್ಷಣಿಕ ‌ಜಿಲ್ಲೆಯ ಜೋಯಿಡಾ ತಾಲೂಕಿನ ಅಣಶಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ, ಅಕ್ಷತಾ ಅನಿಲ್ ಬಾಸಗೋಡ ಇವರಿಗೆ ಈ ವರ್ಷದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ( State Level Best Teacher Award.) ಲಭಿಸಿದೆ.