ಸುದ್ದಿಬಿಂದು ಬ್ಯೂರೋ
ಕುಮಟಾ : ತಾಲೂಕಿನಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ ಎನ್ನುವ ಬಗ್ಗೆ ವಾರದ ಹಿಂದಷ್ಟೆ ಸುದ್ದಿಬಿಂದು ಸುದ್ದಿ ಬಿತ್ತರಿಸಿದ ಬಳಿಕ ಎಚ್ಚೆತ್ತ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಮತ್ತು ಕೊಟ್ಟವರು ಹಾಗೂ ಮತ್ತೇರಿಸಿಕೊಂಡವರ ಹೆರೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದು, ಇದರ ಹಿಂದಿರುವ ಜಾಲವನ್ನ ಮಟ್ಟಹಾಕಲು ಮುಂದಾಗಿದ್ದಾರೆ.

ಮೂರೂರು ಗುಡ್ಡದ ಮೇಲೆ ಗಾಂಜಾ ನಶೆಯಲ್ಲಿ ತೇಲುತ್ತಿದ್ದ ವಿಶಾಲ್ ಭಂಡಾರಿ, ನವೀನ ಗೌಡ ಎಂಬುವರನ್ನು ಬಂಧಿಸಲಾಗಿದೆ. ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ವೈದ್ಯಕೀಯ ತಪಾಸಣೆಯಿಂದ ಖಚಿತ ಪಡಿಸಿಕೊಂಡು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪವನ ಸುಧೀರ ಕುಮಟಾಕರ ಸಿದ್ದನಭಾವಿ, ದಿವಾಕರ (ದೃವ) ವಿಷ್ಣು ಉಪ್ಪಾರ ಸಿದ್ದನಭಾವಿ ಬೈಕ್ ನಲ್ಲಿ ಗಾಂಜಾ ‌ಇಟ್ಟುಕೊಂಡು ಓಡಾಡುತ್ತಿದ್ದು, ಇವರ ವಿರುದ್ದ ಪ್ರಕರಣ ದಾಖಲಾಗಿಧ.

ಕುಮಟಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿದ್ದು, ಯುವಕರನ್ನ ಈಗಾಗಲೆ ಬಂಧಿಸಿದ್ದಾರೆ. ಬಂಧಿತರಿಂದ 5000 ಮೌಲ್ಯದ 132 ಗ್ರಾಂ. ಗಾಂಜಾ ವಶಕ್ಕೆ ಪಡೆಯಲಾಗಿದೆ.

ಸಿಪಿಐ ತಿಮ್ಮಪ್ಪ ನಾಯ್ಕ, ಪಿಎಸ್ಐ ನವೀನ್ ನಾಯ್ಕ, ಸಿಬ್ಬಂದಿಗಳಾದ ಗಣೇಶ ನಾಯ್ಕ, ಲೊಕೇಶ ಅರಶಿನಗುಪ್ಪಿ , ಗುರು ನಾಯಕ, ಪ್ರದೀಪ ನಾಯಕ, ಸುಬ್ರಮಣ್ಯ ಹೆಗಡೆ ಇವರುಗಳ ತಂಡ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.